

ಹುಕ್ಕೇರಿ: ತಾಲೂಕಿನ ಬೆಳವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದೆ. ಶಾಲೆಯ ಸರ್ವತೋಮುಖ ಬೆಳವಣಿಗೆ ಮತ್ತು ಆಧುನಿಕವಾಗಿ ಮಾರ್ಪಡಿಸಲು ಗ್ರಾಪಂ ಹಲವು ಕೊಡುಗೆ ನೀಡಿದ್ದು, ಶ್ಲಾಘನೀಯ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಬೆಳವಿ ಗ್ರಾಪಂ ವತಿಯಿಂದ ಪ್ರಾಥಮಿಕ ಶಾಲೆಗೆ ಕೊಡುಗೆ ನೀಡಿದ ಸ್ಮಾರ್ಟ್‌ಕ್ಲಾಸ್ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಪಂ ಗ್ರಾಮದ ಸ್ಥಿತಿವಂತರ ಜತೆಗೂಡಿ ಶಾಲೆಗೆ ಆಧುನಿಕ ತಂತ್ರಜ್ಞಾನ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದರು.
ಗ್ರಾಪಂ ಸದಸ್ಯ ಸತ್ಯಪ್ಪ ನಾಯಿಕ ಮಾತನಾಡಿದರು. ಮಕ್ಕಳಿಗೆ ಪೀಠೋಪಕರಣ ಮತ್ತು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸ್ಕೂಲ್‌ಬ್ಯಾಗ್ ವಿತರಿಸಲಾಯಿತು. ಪ್ರೌಢಶಾಲೆಯ ಭೋಜನಾಲಯ ಉದ್ಘಾಟಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಪಾರ್ವತಿ ಚಿಕ್ಕಣಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ಘಸ್ತಿ, ಮುಖ್ಯಶಿಕ್ಷಕ ಬಸವಪ್ರಭು ಅಂಗಡಿ, ಸದಸ್ಯರಾದ ವಿಠ್ಠಲ ಅವುಬಾಯಿಗೋಳ, ಜಯಶ್ರೀ ಪಾಟೀಲ, ಶೋಭಾ ಮಗದುಮ್ಮ, ಪಿಕೆಪಿಎಸ್ ಅಧ್ಯಕ್ಷ ಲಿಂಗರಾಜ ನಾಯಿಕ, ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಖಡಕಭಾವಿ, ಎಸ್.ಆರ್. ಕರ್ಕಿನಾಯಿಕ, ಎಂ.ಬಿ.ನಾಯಿಕ, ಮಾರುತಿ ಘಸ್ತಿ, ರಾಮಣ್ಣ ಘಸ್ತಿ, ಶಿವನಾಯಿಕ ನಾಯಿಕ, ಸಂಜು ಚಿಕ್ಕೋಡಿ, ಸಾತವೀರ ನಾಯಿಕ, ಮಹಾದೇವ ನಾಯಿಕ, ಸುಭಾಷ ಘಸ್ತಿ, ಭಾಪು ಚಿಕ್ಕಣಗಿ, ರಾಜು ಢಂಗೆ, ಸವಿತಾ ಹಲಕಿ, ಶೀಲಾ ತಳವಾರ, ಶಕ್ತಿಸಿಂಗ ಖಟಾವಕರ, ನಾಯಕ ನಾಯಿಕ, ವಿರುಪಾಕ್ಷ ದೊಡಮನಿ ಇತರರಿದ್ದರು.