

ಕುಡಚಿ: ಅತಿಕ್ರಮಣ ಮಾಡಿಕೊಂಡಿದ್ದಾರೆ. ಕೂಡಲೆ ತೆರುವುಗೊಳಿಸಿ ಸರ್ಕಾರಿ ಜಾಗ ಸಂರಕ್ಷಿಸಬೇಕೆಂದು ಪುರಸಭೆ ಸದಸ್ಯ ದತ್ತಾ ಸಣ್ಣಕ್ಕಿ ಅವರು ಪುರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯ ದತ್ತಾ ಸಣ್ಣಕ್ಕಿ ಮಾತನಾಡಿ, ಪುರಸಭೆ ವ್ಯಾಪ್ತಿಯ ದಾದಿ ನಗರದಲ್ಲಿ ರಿ.ಸ.ನಂ 639ರಲ್ಲಿ 14 ಎಕರೆ ಸರ್ಕಾರಿ ಜಮೀನು ಇದೆ. ಅದರಲ್ಲಿ ಸ್ಮಶಾನ ಭೂಮಿಗೆ 10 ಗುಂಟೆ ಹಾಗೂ ರಾಜೀವ ಗಾಂಧಿ ವಸತಿ ನಿಗಮದಿಂದ ಹಲವು ಮನೆಗಳನ್ನು ನಿರ್ಮಿಸಿ ಫಲನುಭವಿಗಳಿಗೆ ಹಂಚಿಕೆ ಮಾಡಿದ್ದಾರೆ.
ಇನ್ನೂಳಿದ ಜಾಗವನ್ನು 35 ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅತಿಕ್ರಮಣ ಜಾಗವನ್ನು ತೆರವುಗೊಳಿಸಿ ಪುರಸಭೆ ಜಾಗವನ್ನು ರಕ್ಷಕಿಸಬೇಕು.
ಇಲ್ಲದಿದ್ದಲ್ಲಿ ಜು.25 ರಂದು ಪುರಸಭೆ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪುರಸಭೆ ಕಾರ್ಯನಿರ್ವಾಹಕ ಅಭಿಯಂತ ಎಸ್.ಆರ್.ಚೌಗಲಾ ಇದ್ದರು.