

ಗಜೇಂದ್ರಗಡ: ಭಾವಸಾರ ಕ್ಷತ್ರೀಯ ಸಮಾಜದಲ್ಲಿ ಬಹು ಸಂಖ್ಯೆಯಲ್ಲಿ ಬಡವರಿದ್ದು, ಅವರ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಸಮಾಜದ ಸವೋತೊಮುಖ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಲು ಒತ್ತಡ ಹಾಕಲಾಗುವುದು ಎಂದು ಬಾಗಲಕೋಟೆಯ ಯಶವಂತ ಬೋದಲೇ ಮಹಾರಾಜರು ಹೇಳಿದರು
ಪಟ್ಟಣದ ಪತ್ತಾರಗಲ್ಲಿಯ ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಇತ್ತೀಚೆಗೆ ಆಯೋಜಿಸಿಸದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಿರಂತರ ಪರಿಶ್ರಮ ಮತ್ತು ಅಧ್ಯಯನದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಜೀವನದಲ್ಲಿ ಮಕ್ಕಳು ಉನ್ನತ ಗುರಿ ಇಟ್ಟುಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 40ಕ್ಕೂ ಅಧಿಕ ದಾನಿಗಳಿಗೆ ಸಮಾಜದ ವತಿಯಿದ ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಚಂದ್ರಕಾಂತ ಮಹೇಂದ್ರಕರ, ರೇಣುಕಾ ಕರ್ಣೆ, ಸರೋಜಾ ನಾವಡೆ, ವಿನಾಯಕ ಜಾಧವ, ಪ್ರಕಾಶ ಅಂಬೋರೆ, ರಮೇಶ ಅಂಬೋರೆ, ಶಿವಾಜಿ ಕಮಿತ್ಕರ, ಪುಂಡಲಿಕ ಹಂಚಾಟೆ, ರಾಘವೇಂದ್ರ ಮಾಂಡ್ರೆ, ಹನಮಂತ ಹೆಬ್ಬಾರೆ, ಮಂಜುಳಾ ನವಲೆ, ರೇಖಾ ಅಂಬೋರೆ, ರೂಪಾ ಹಂಚಾಟೆ, ಸುನಂದಾ ನಾವಡೆ, ಹೇಮಾ ಜಿಂಗಾಡೆ, ಶೋಭಾ ಜಾಧವ, ಲಕ್ಷ್ಮೀ ಅಂಬೋರೆ, ಪ್ರೇಮಾ ನಾವಡೆ, ಪ್ರಿಯಾ ಹೆಬ್ಬಾರೆ, ಸುಮಾ ಮಹೇಂದ್ರಕರ ಇತರರು ಇದ್ದರು.