ಪತ್ರಿಕಾ ವಿತಕರ ನೆರವಿಗೆ ಸರ್ಕಾರ ಧಾವಿಸಲಿ

ಪ್ರತಿದಿನ ನುಸುಕಿನಲ್ಲೇ ಮಳೆ, ಚಳಿ ಲೆಕ್ಕಿಸದೆ ದುಡಿಯುವ ಕಾಯಕ ಜೀವಿಗಳು ಪತ್ರಿಕಾ ವಿತರಕರು.
Ptrika Vitarakara Neravige Sarkara Dhavisali
Published on

ಇಂದು ಪತ್ರಿಕಾ ವಿತರಕರ ದಿನಾಚರಣೆ. ಪ್ರತಿದಿನ ನುಸುಕಿನಲ್ಲೇ ಮಳೆ, ಚಳಿ ಲೆಕ್ಕಿಸದೆ ದುಡಿಯುವ ಕಾಯಕ ಜೀವಿಗಳು ಪತ್ರಿಕಾ ವಿತರಕರು. ಸೂಯೋರ್ದಯಕ್ಕೆ ಮೊದಲು ಜಗತ್ತಿನ ಸಮಗ್ರ ವಿಷಯಗಳನ್ನು ತುಂಬಿದ ದಿನಪತ್ರಿಕೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುತ್ತಾರೆ. ಇಂತಹ ಸೇನಾನಿಗಳಿಗೆ ಶೈಕ್ಷಣಿಕ, ಆರ್ಥಿಕ, ಆರೋಗ್ಯ, ಸೈಕಲ್​ ಇಲ್ಲವೇ ದ್ವಿಚಕ್ರ ವಾಹನಕ್ಕೆ ಖರೀದಿಗೆ ಆರ್ಥಿಕ ನೆರವು, ಬಡ್ಡಿರಹಿತ ಸಾಲ ಸೇರಿದಂತೆ ನಾನಾ ಸವಲತ್ತುಗಳನ್ನು ಒದಗಿಸಬೇಕೆಂಬ ಒತ್ತಾಯವು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಸರ್ಕಾರದಿಂದ ಸ್ಥಾಪನೆಯಾಗಿರುವ ಪತ್ರಿಕಾ ವಿತರಕರ ಕಲ್ಯಾಣ ನಿಧಿಯ ನೆರವು ಇದುವರೆಗೂ ಸಿಕ್ಕಿಲ್ಲ. ಇದೆಲ್ಲದರ ಬಗ್ಗೆ ಜಿಲ್ಲೆಯ ಪತ್ರಿಕಾ ವಿತರಕರು ಲೌಡ್​ಸ್ಪೀಕರ್​ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತುಂಬಾ ಬೇಸರವಾಗುತ್ತಿದೆ
ಪತ್ರಿಕಾ ವಿತರಕರಿಗೆ ನೆರವು ಒದಗಿಸುವ ಭರವಸೆಯ ವಿಚಾರದಲ್ಲಿ ತುಂಬಾ ಬೇಸರವಾಗುತ್ತಿದೆ. ಸರ್ಕಾರವು ಮೀಸಲಿಟ್ಟಿದ್ದ ಅನುದಾನವು ಏನಾಯಿತು ಎಂಬುದರ ಬಗ್ಗೆ ತಿಳಿದಿಲ್ಲ. ಹೇಳಿದಂತೆ ನಡೆದುಕೊಂಡಿಲ್ಲ. ಪ್ರತಿ ವರ್ಷ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಸುಮ್ಮನೆ ಏಕೆ ಆಸೆ ಹುಟ್ಟಿಸಬೇಕು?.

ಕೊಳವನಹಳ್ಳಿ ದೇವರಾಜ್​, ಪತ್ರಿಕಾ ವಿತರಕ, ಚಿಕ್ಕಬಳ್ಳಾಪುರ
ಸಕಾರಾತ್ಮಕ ಕೆಲಸಗಳಾಗಲಿ
ಪತ್ರಿಕಾ ವಿತರಕರ ೇಮಾಭಿವೃದ್ಧಿ ನಿಧಿ ಸ್ಥಾಪನೆಯ ವಿಚಾರವಾಗಿ ಈಗಲಾದರೂ ಸಕಾರಾತ್ಮಕ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತಡ ಹೇರಬೇಕಾಗಿದೆ. ನುಡಿದಂತೆ ನಡೆಯುವ ಸರ್ಕಾರ ಎಂತಲೇ ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಮತ್ತೆ ೂಷಣೆಯನ್ನು ನೆನಪಿಸಿಕೊಂಡು ಅನುಷ್ಠಾನಗೊಳಿಸಬೇಕು.

ನಾಗರಾಜ್​, ಪತ್ರಿಕಾ ವಿತರಕ, ದೊಡ್ಡಗಂಜೂರು
ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ
ಈಗ ಎಲ್ಲವೂ ದುಬಾರಿಯಾಗಿದೆ. ಆದರೆ, ಸಂಪಾದನೆ ಮಾತ್ರ ಹೆಚ್ಚುತ್ತಿಲ್ಲ. ಕಡಿಮೆ ಹಣಕ್ಕೆ ದುಡಿಯುವಂತಾಗಿದೆ. ನಿರೀೆಗೆ ಅನುಗುಣವಾಗಿ ಸಮರ್ಪಕ ಸವಲತ್ತು ಸಿಗುತ್ತಿಲ್ಲ. ಮೊದಲು ವಿಮೆ ಸೌಲಭ್ಯ, ವಾಹನ ಖರೀದಿಗೆ ಸಾಲ, ಪತ್ರಿಕಾ ವಿತರಕರಾಗಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೋತ್ಸಾಹ ಧನದ ಸೌಕರ್ಯಗಳು ಸಿಗಬೇಕು.

ದೇವರಾಜ್​, ಪತ್ರಿಕಾ ವಿತರಕರು, ಚೀಮಂಗಲ

ಆತ್ಮಸ್ಥೆರ್ಯ ತುಂಬಬೇಕು
ಚಳಿ ಮಳೆ ಎನ್ನದೇ ಮುಂಜಾವದಲ್ಲಿ ಮನೆ ಮನೆಗೂ ದಿನಪತ್ರಿಕೆಗಳನ್ನು ತಲುಪಿಸುವಿಕೆಯ ಕೆಲಸವನ್ನು ಹಲವು ವರ್ಷಗಳಿಂದ ಕೈಗೊಳ್ಳುತ್ತ ಬರಲಾಗುತ್ತಿದೆ. ಇದೇ ವೇಳೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿ ನೆರವು ಸಿಗಬೇಕಾಗಿದೆ. ಸ್ವಾಭಿಮಾನದಿಂದ ಕೆಲಸ ನಿರ್ವಹಿಸಲು ಆತ್ಮಸ್ಥೆರ್ಯವನ್ನು ತುಂಬಬೇಕು.
ಸಮೀರ, ಪತ್ರಿಕಾ ವಿತರಕರು, ಗೌರಿಬಿದನೂರು


ಪ್ರತ್ಯೇಕ ನಿಗಮ ಸ್ಥಾಪನೆ ಅಗತ್ಯ
ಹಲವು ವರ್ಷಗಳಿಂದಲೂ ಪತ್ರಿಕಾ ವಿತರಕರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಕನಿಷ್ಠ ಯೋಗೇಮ ವಿಚಾರದಲ್ಲಾದರೂ ಸ್ಪಂದನೆ ಸಿಗದಿರುವುದು ದುರದೃಷ್ಟಕರ. ಇದಕ್ಕೆ ಪತ್ರಿಕಾ ವಿತರಕರ ಪ್ರತ್ಯೇಕ ನಿಗಮ ಸ್ಥಾಪನೆಯ ಅಗತ್ಯವಿದೆ. .

ಆನಂದ್​, ಪತ್ರಿಕಾ ವಿತರಕರು, ಗೌಡಸಂದ್ರ


ಓದುವ ಮನೋಭಾವ ಹೆಚ್ಚಲಿ
ಸುದ್ದಿ ಮಾಧ್ಯಮದಲ್ಲಿ ಪತ್ರಿಕಾ ವಿತರಕರ ಪಾತ್ರವು ಮಹತ್ತರವಾದುದು. ಮನೆ ಮನೆಗಳನ್ನು ಗುರುತಿಸಿ, ನಿರಂತರವಾಗಿ ದಿನಪತ್ರಿಕೆಗಳನ್ನು ಓದುವ ಮನೋಭಾವನೆಯನ್ನು ಜನರಲ್ಲಿ ಹೆಚ್ಚಿಸಲಾಗುತ್ತಿದೆ. ಅನೇಕ ಸಂದರ್ಭದಲ್ಲಿ ಬಿಲ್​ ಪಾವತಿಯಾಗದಿದ್ದರೂ ಸಹಿಸಿಕೊಂಡು ಹೋಗಿರುವ ಪ್ರಕರಣಗಳೇನೂ ಕಡಿಮೆ ಇಲ್ಲ.

ಮಂಜುನಾಥ್​, ಪತ್ರಿಕಾ ವಿತರಕರು, ಗೌರಿಬಿದನೂರು


ಕನ್ನಡ ದಿನಪತ್ರಿಕೆಗೆ ಪೋತ್ಸಾಹ ನೀಡಿ
ಪ್ರಚಲಿತ ವಿದ್ಯಮಾನಗಳ ಜ್ಞಾನಾರ್ಜನೆಗೆ ಸಹಕಾರಿಯಾಗಿರುವ ದಿನಪತ್ರಿಕೆಗಳನ್ನು ಪ್ರತಿಯೊಬ್ಬರು ಹೆಚ್ಚಿಗೆ ಓದಬೇಕು. ಅದರಲ್ಲೂ ಮಾತೃಭಾಷೆಯ ಉಳಿಸಿ, ಬೆಳೆಸುವ ವಿಚಾರವಾಗಿ ಕನ್ನಡ ದಿನಪತ್ರಿಕೆಗಳಿಗೆ ನಿರಂತರವಾಗಿ ಪೋತ್ಸಾಹ ನೀಡಬೇಕು. ಪ್ರಮುಖವಾಗಿ ಪ್ರತಿ ತಿಂಗಳು ಬಿಲ್​ ಅನ್ನು ಸಮರ್ಪಕವಾಗಿ ಗ್ರಾಹಕರು ಪಾವತಿಸಬೇಕು. ಇದರಲ್ಲಿ ಸತಾಯಿಸಬಾರದು.

ಶಿವಕುಮಾರ್​, ಪತ್ರಿಕಾ ವಿತರಕರು, ಹೊಸಹುಡ್ಯ


ಖರೀದಿ ಮಾಡುವ ಪ್ರವೃತ್ತಿ ಹೆಚ್ಚಲಿ
ಸಾಮಾಜಿಕ ಜಾಲತಾಣಗಳ ಮಿತಿ ಮೀರಿದ ಪ್ರಭಾವದ ನಡುವೆಯೂ ದಿನಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದುವ ಪ್ರವೃತ್ತಿಯೂ ಹೆಚ್ಚಾಗಬೇಕು. ಇದರಲ್ಲಿ ಹಿಮ್ಮುಖವಾಗುವುದು ಸರಿಯಲ್ಲ. ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ದಿನಪತ್ರಿಕೆಗಳನ್ನು ಖರೀದಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ಗಿರೀಶ್​, ಪತ್ರಿಕಾ ವಿತರಕ, ಭಕ್ತರಹಳ್ಳಿ


ಸಮಸ್ಯೆಗಳಿಗೆ ಬೇಕು ಪರಿಹಾರ:
ಪತ್ರಿಕಾ ವಿತರಕರಿಗೆ ಸಿಗಬೇಕಾಗಿರುವ ನಿರೀೆಯ ನೆರವು, ಸಮಸ್ಯೆಗಳ ಪರಿಹಾರದ ಬಗ್ಗೆ ಪ್ರಾಮಾಣಿಕ ಸ್ಪಂದನೆಯ ಅಗತ್ಯವಿದೆ. ಈ ಹಿಂದೆ ಸರ್ಕಾರವೇ ೂಷಿಸಿದ ಯೋಜನೆಗಳನ್ನು ಮೊದಲು ಅನುಷ್ಠಾನಗೊಳಿಸಬೇಕು.

ರಾಜ್​ ಕುಮಾರ್​, ಪತ್ರಿಕಾ ವಿತರಕ, ಬಾಗೇಪಲ್ಲಿ


ಎಚ್ಚರಿಸುವ ಕೆಲಸವಾಗಲಿ
ಪತ್ರಿಕಾ ವಿತರಕರಿಗೂ ಭರವಸೆಯನ್ನು ಸರ್ಕಾರವೇ ನೀಡಿ, ಈಡೇರಿಸದಿರುವುದು ನಿಜವಾಗಲೂ ದುರದೃಷ್ಟಕರ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಪತ್ರಿಕಾ ವಿತರಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸವಾಗಬೇಕಾಗಿದೆ.

ಮುರಳಿ, ಪತ್ರಿಕಾ ವಿತರಕ, ಬಾಗೇಪಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net