ಪತ್ರಿಕಾ ವಿತರಕರ ಬೇಡಿಗಳಿಗೆ ಸರ್ಕಾರ ಸ್ಪಂದಿಸಲಿ

Let the government respond to the demands of press distributors
ರಬಕವಿ-ಬನಹಟ್ಟಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಆಳಗಿ ಮಾತನಾಡಿದರು. ಉಲ್ಲಾಸ ಯಂಕಾಚಿ, ಅನೀಲ ಕಾರಜೋಳ ಇದ್ದರು.
Published on

ರಬಕವಿ-ಬನಹಟ್ಟಿ: ಪತ್ರಿಕಾ ವಿತರಕರ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಮನದಟ್ಟು ಮಾಡಿಕೊಂಡು ಸೂಕ್ತ ಪರಿಹಾರದೊಂದಿಗೆ ವಿತರಕರಿಗೆ ಪ್ರೋತ್ಸಾಹಿಸಬೇಕಿದೆ ಎಂದು ರಬಕವಿ-ಬನಹಟ್ಟಿ ತಾಲೂಕು ವಿತರಕರ ಸಂಘದ ಅಧ್ಯಕ್ಷ ವಿಶ್ವನಾಥ ಅಳಗಿ ಹೇಳಿದರು.

ಬನಹಟ್ಟಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಬ್ಬ ವರದಿಗಾರ ಸುದ್ದಿ ಬರೆಯಬಹುದು, ಪತ್ರಿಕಾಲಯದಲ್ಲಿ ಅದನ್ನು ಪ್ರಕಟಿಸಬಹುದು. ಆದರೆ, ಅದನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಮುಖವಾಗಿದೆ. ಅದನ್ನು ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ ಎಂದರಲ್ಲದೆ, ಅವನತಿಯತ್ತ ಸಾಗುತ್ತಿರುವ ಪತ್ರಿಕೆಗಳನ್ನು ಬೆಳೆಸಿ-ಪೋಷಿಸುವ ಕಾರ್ಯವನ್ನು ವಿತರಕರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

‘ವಿಜಯವಾಣಿ’ ವಿತರಕ ಅನೀಲ ಕಾರಜೋಳ ಮಾತನಾಡಿ, ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಕೆ ಓದುವ ಹವ್ಯಾಸವಿರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಬೇಸಿಗೆ, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಯಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ. ಪತ್ರಿಕಾ ವಿತರಕರನ್ನು ಕೀಳುಮಟ್ಟದಲ್ಲಿ ನೋಡುವುದು ಬದಲಾಗಬೇಕು ಎಂದರು.

ರಬಕವಿಯ ‘ವಿಜಯವಾಣಿ ವಿತರಕ ಉಲ್ಲಾಸ ಯಂಕಚಿ, ಶಂಭುಲಿಂಗ ಗುಣಕಿ, ಮಲ್ಲಿಕಾರ್ಜುನ ತುಂಗಳ, ರಾಜು ಶಿರಹಟ್ಟಿ, ಗುರು ಬದಾಮಿ, ಬಾಳು ಲಕ್ಷ್ಮೇಶ್ವರ, ಶ್ರೀಶೈಲ ಶಿರಹಟ್ಟಿ, ಪ್ರಸನ್ನ ಮಂಡಿ, ಕಾಡು ತಳವಾರ, ವಿನಾಯಕ ಮೈತ್ರಿ, ಲಕನ್ ತಳವಾರ, ಯಶವಂತ, ರಾಘು ಬಾಣಕಾರ, ಕಾರ್ತಿಕ, ನಿರಂಜನ ಸುಲ್ತಾನಪುರ, ಗೌತಮ ಪಾಟೀಲ, ತೋತಾ ಬಿಳ್ಳೂರ, ಮಲ್ಲಯ್ಯ ಮಠಪತಿ, ಶಿವು ಕಾಡದೇವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net