ಸರ್ಕಾರ ಬೆಳೆ ಪರಿಹಾರ ನೀಡಲಿ

ಯಲಬುರ್ಗಾ ತಹಸಿಲ್ ಕಚೇರಿಯಲ್ಲಿ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಹಾಗೂ ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ರಾಜಶೇಖರ ಶ್ಯಾಗೋಟಿ, ಪ್ರಮುಖರಾದ ಶಂಕರ ಮೂಲಿ, ಗೌಡಪ್ಪ ಬಲಕುಂದಿ, ಶಿವರಾಜ ಚಿಕ್ಕೊಪ್ಪ ಇತರರಿದ್ದರು.

Published on

ಯಲಬುರ್ಗಾ: ವಾಡಿಕೆಗೂ ಅಧಿಕ ಮಳೆಯಿಂದ ನಷ್ಟಗೊಂಡ ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರವೇ (ಎಚ್.ಶಿವರಾಮೇಗೌಡ ಬಣ) ಕಾರ್ಯಕರ್ತರು ತಹಸಿಲ್ ಕಚೇರಿಯಲ್ಲಿ ಎಸಿ ಮಹೇಶ ಮಾಲಗಿತ್ತಿ ಹಾಗೂ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮೂಲಕ ಡಿಸಿಗೆ ಗುರುವಾರ ಮನವಿ ಸಲ್ಲಿಸಿದರು.

ಕರವೇ ತಾಲೂಕಾಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿ, ತಾಲೂಕಿನಲ್ಲಿ ಸುರಿದ ಮಳೆಗೆ ಹೆಸರು, ಶೇಂಗಾ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಹೆಚ್ಚಿನ ತೇವಾಂಶದಿಂದ ಹಳದಿ ಬಣ್ಣಕ್ಕೆ ತಿರುಗಿ ಕೊಳೆತಿವೆ. ಇರುವ ಬೆಳೆ ಉಳಿಸಿಕೊಳ್ಳಲು ರೈತರಿಗೆ ಯೂರಿಯಾ ಗೊಬ್ಬರ ವಶ್ಯವಿದ್ದು, ಇದನ್ನೂ ಸರ್ಕಾರ ಸರಿಯಾಗಿ ಪೂರೈಸದ ಕಾರಣ ರೈತರು ಪರದಾಡುವಂತಾಗಿದೆ. ಕೂಡಲೇ ರೈತರಿಗೆ ಸಮರ್ಪಕವಾಗಿ ಗೊಬ್ಬರ ಪೂರೈಸಬೇಕು. ಅನೇಕ ಗ್ರಾಮದಲ್ಲಿ ಮಳೆಗೆ ಮನೆಗಳು ಹಾನಿಯಾಗಿದ್ದು, ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಶಂಕರ ಮೂಲಿ, ಗೌಡಪ್ಪ ಬಲಕುಂದಿ, ಶಿವರಾಜ ಚಿಕ್ಕೊಪ್ಪ, ರಾಮನಗೌಡ, ಹನುಮೇಶ ಬುಡಶೆಟ್ನಾಳ, ನಾಗಯ್ಯ ಗುರುಮಠ, ಮಲ್ಲೇಶ ಕುಲಕರ್ಣಿ, ಆಕಾಶ, ಪರಶುರಾಮ, ತಾಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net