

ಸಿಂದಗಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೀವನಾಡಿ ಹಾಗೂ ಕೋವಿಡ್ ಕಷ್ಟ ಕಾಲದ ಧ್ವನಂತರಿಯಂತೆ ಜೀವದ ಹಂಗು ತೊರೆದು ಕೆಲಸ ಮಾಡಿದ್ದ ಆಶಾ ಕಾರ್ಯರ್ತೆಯರ ಹಿತ ಕಾಪಾಡಲು ಸರ್ಕಾರದ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಅಧ್ಯ ಎಚ್.ಟಿ.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದ ಆಶ್ರಯದಲ್ಲಿ ಸೋಮವಾರ ನಡೆದ ಆಶಾ ಕಾರ್ಯರ್ತೆಯರ ತಾಲೂಕುಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಆಶಾ ಕಾರ್ಯರ್ತೆಯರ ಸೇವೆ ಆರಂಭಗೊಂಡಾಗಿನಿಂದಲೂ ನವಜಾತ ಶಿಶುಗಳು ಹಾಗೂ ತಾಯಂದಿರ ಮರಣ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ.
ಆದರೆ ಇಂತಹ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸದೆ ಸರ್ಕಾರ ಕಾಲಕಾಲಕ್ಕೆ ಸಂಬಳ ನೀಡದೇ ಕೇವಲ ಪ್ರಶಂಸೆಗೆ ಸೀಮಿತಗೊಳಿಸಿದೆ. ಅಧಿಕಾರಕ್ಕೆ ಬರುವ ಪಗಳೆಲ್ಲವೂ ಕಾರ್ಮಿಕರ ಹಿತ ಕಾಪಾಡುತ್ತಿಲ್ಲ. ಸದಾ ದ್ರೋಹ ಬಗೆಯುತ್ತಲೇ ಕಾಲ ಕಳೆಯುತ್ತಿವೆ.
ಬಂಡವಾಳಶಾಹಿಗಳ ಅಟ್ಟಹಾಸ ತಡೆಯಬೇಕು. ಸಮಾಜದಲ್ಲಿನ ಮೂಲಭೂತ ಬದಲಾವಣೆಗೆ ಪೂರಕವಾದ ಕಾರ್ಮಿಕರ ಹಿತ ಕಾಪಾಡುವ ರಾಜ್ಯದ ಆಡಳಿತ ಸ್ಥಾಪನೆಗೊಳ್ಳಬೇಕು. ಇಲ್ಲವಾದರೆ ಹೋರಾಟದ ಹಾದಿ ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಎ.ಎಂ.ಮಾಗಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯ ಆಶಾ ಕಾರ್ಯರ್ತೆಯರ ಜವಾಬ್ದಾರಿಯಾಗಿದೆ. ಕಾರ್ಯಕರ್ತೆಯರು ತಮ್ಮ ಆರೋಗ್ಯದೊಂದಿಗೆ ಸಮಾಜದ ಜನರ ಆರೋಗ್ಯವನ್ನು ಕಾಪಾಡಬೇಕು ಎಂದರು.
ಸಮ್ಮೇಳನದ ಅಧ್ಯತೆಯನ್ನು ತಾಲೂಕು ಟಕದ ಅಧ್ಯೆ ರೇಣುಕಾ ಕಲ್ಲಕುಟಗೇರ ವಹಿಸಿದ್ದರು. ಆಶಾ ಸಂಟನೆಯ ಜಿಲ್ಲಾ ಮುಖಂಡ ಎಚ್.ಟಿ.ಭರತಕುಮಾರ ವೇದಿಕೆಯಲ್ಲಿದ್ದರು.
ಸಮ್ಮೇಳನದ ಆರಂಭದಲ್ಲಿ ಎ.ಐ.ಯು.ಟಿ.ಯು.ಸಿ. ಸಂಸ್ಥಾಪನಾ ಅಧ್ಯ ಕಾಮ್ರೆಡ್ ಶಿವದಾದ ೂಷರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮ್ಮೇಳನದಲ್ಲಿ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.