ರಂಗಭೂಮಿ ಕಲಾವಿದರಿಗೆ ಸರ್ಕಾರ ನೆರವಾಗಲಿ

03M.D.R.3
ಪಟ್ಟಣದ ಹಿರಿಯ ಕಲಾವಿದರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹದೇವು, ಕೆ.ನಾಗರಾಜು, ಸತ್ಯಪ್ಪ ಅವರನ್ನು ಅಭಿನಂದಿಸಲಾಯಿತು. ಸಿ.ಜಿ.ಗೌರಿಶಂಕರ್, ಬಿ.ಶಿವಣ್ಣ, ವೀರಭದ್ರಚಾರ್, ಮಹದೇವು ಇದ್ದರು.
Published on

ಮದ್ದೂರು : ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದು, ಸರ್ಕಾರ ಅಗತ್ಯ ಸಹಕಾರ ನೀಡಬೇಕು ಎಂದು ಹಿರಿಯ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹದೇವು ಮನವಿ ಮಾಡಿದರು.

ಪಟ್ಟಣದ ಶಿವಪುರದ ಹೊಸ ಕೊಪ್ಪ ಸರ್ಕಲ್‌ನಲ್ಲಿರುವ ಸಂಘದ ಹಿರಿಯ ಕಲಾವಿದರ ಸಂಘದ ಕಚೇರಿಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಂಗಭೂಮಿ ಕಲಾವಿದರು ಇತ್ತೀಚಿನ ದಿನಗಳಲ್ಲಿ ಕಷ್ಟದ ಜೀವನ ನಡೆಸುತ್ತಿದ್ದು, ಸರ್ಕಾರ ಮತ್ತು ಸಂಘ, ಸಂಸ್ಥೆಗಳು ಸಹಕಾರ ನೀಡುವ ಮೂಲಕ ಸಹಾಯ ಹಸ್ತ ಚಾಚಬೇಕು ಎಂದರು.

ರಂಗಭೂಮಿ ತನ್ನದೆಯಾದ ಇತಿಹಾಸ ಹೊಂದಿದ್ದು, ರಂಗಭೂಮಿ ಹಿನ್ನೆಲೆಯಲ್ಲಿ ಬಂದ ಹಲವಾರು ಕಲಾವಿದರು ರಾಷ್ಟ್ರ ಮತ್ತು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಇಂತವರೇ ನಮಗೆ ಸ್ಪೂರ್ತಿ ಎಂದರು.

ಹಿರಿಯ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹದೇವು, ಉಪಾಧ್ಯಕ್ಷ ಕೆ.ನಾಗರಾಜು ಹಾಗೂ ಹಿರಿಯ ಕಲಾವಿದ ಸತ್ಯಪ್ಪ ಅವರನ್ನು ಅಭಿನಂದಿಸಲಾಯಿತು. ಸಂಘದ ಕಾರ್ಯದರ್ಶಿ ಎಂ.ಆರ್.ವೀರಭದ್ರಸ್ವಾಮಿ, ಸಹ ಕಾರ್ಯದರ್ಶಿ ರಾಮಣ್ಣ, ಖಜಾಂಚಿ ಬಿ.ಶಿವಣ್ಣ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಜಿ.ಗೌರಿಶಂಕರ, ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಶ್ರೀಕಂಠ, ಬಿಜೆಪಿ ಮುಖಂಡ ಜಗನ್ನಾಥ್, ಕಲಾವಿದರಾದ ಬಿ.ಶಿವಣ್ಣ, ಈರಪ್ಪ, ತೈಲೂರು ಆನಂಚಚಾರಿ, ವಿಶ್ವ ಕರ್ಮ ತಾಲೂಕು ಅಧ್ಯಕ್ಷ ಬಸವರಾಜು, ಅರ್ಚಕರಾದ ಗೌರಿಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net