ಸರ್ಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಲಿ

1 KMP 02
ಕಂಪ್ಲಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರು, ಸಹಿಪ್ರಾಶಾಲೆ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡ 4ನೇ ಫ್ಯಾಕ್ಟರಿ ಹಬ್ಬ ನಿಮಿತ್ತ ಶ್ರೀಭುವನೇಶ್ವರಿ ಮೆರವಣಿಗೆ ನಡೆಯಿತು. ಪ್ರಮುಖರಾದ ಕಿನ್ನೂರೇಶ್ವರ, ವೆಂಕಟಸ್ವಾಮಿ, ಮಾಧವರೆಡ್ಡಿ, ವೀರಾರೆಡ್ಡಿ, ಶಿವೇಶ್ವರಗೌಡ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಸಕ್ಕರೆ ಕಾರ್ಖಾನೆಯ ಕಾರ್ಮಿಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳು, ಕೋದಂಡರಾಮ ದೇವಸ್ಥಾನದಲ್ಲಿ ಭಾನುವಾರ ನಮ್ಮೂರ ಶಾಲೆ ನಮ್ಮೂರ ಹಬ್ಬ, 4ನೇ ಫ್ಯಾಕ್ಟರಿ ಹಬ್ಬ ಆಚರಿಸಿದರು.

ಈ ನಿಮಿತ್ತ ಫ್ಯಾಕ್ಟ್ರಿಯ ಕಾಳಮ್ಮ ದೇವಸ್ಥಾನದಿಂದ ಶ್ರೀಭುವನೇಶ್ವರಿ ಭಾವಚಿತ್ರ ಮೆರವಣಿಗೆ ಸಾಗಿ ಕೋದಂಡರಾಮ ದೇವಸ್ಥಾನದ ಸಭಾಂಗಣದಲ್ಲಿ ಸಮಾರೋಪಗೊಂಡಿತು.

ನಂತರ ನಡೆದ ಸಮಾವೇಶದಲ್ಲಿ ಸಕ್ಕರೆ ಕಾರ್ಖಾನೆಯ ಹಿರಿಯ ಕಾರ್ಮಿಕರನ್ನು ಗೌರವಿಸಲಾಯಿತು. ಶಾಲೆ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಮರಣ ಹೊಂದಿದ ಕಾರ್ಮಿಕ, ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಸಕ್ಕರೆ ಕಾರ್ಖಾನೆ ಚೇರ‌್ಮನ್ ಎಚ್.ಲಿಂಗಾರೆಡ್ಡಿ ಪ್ರತಿಮೆಗೆ ಹೂವಿನಹಾರ ಹಾಕಿ ಗೌರವಿಸಲಾಯಿತು.

ಸಮಾವೇಶದಲ್ಲಿ ಫ್ಯಾಕ್ಟರಿ ಜಾಗದಲ್ಲಿ ಪುನಃ ಸಕ್ಕರೆ ಕಾರ್ಖಾನೆ ಸ್ಥಾಪಿಸುವಲ್ಲಿ ಸರ್ಕಾರ ಮುಂದಾಗಬೇಕು. ಕಂಪ್ಲಿ ಸಹಕಾರ ಸಕ್ಕರೆ ಕಾರ್ಖಾನೆಯ ಚೇರ‌್ಮನ್ ಎಚ್.ಲಿಂಗಾರೆಡ್ಡಿ ವೃತ್ತ ನಿರ್ಮಿಸುವಲ್ಲಿ ಪುರಸಭಾಡಳಿತ ಮುಂದಾಗಬೇಕು ಎಂದು ಎರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಸಮಾವೇಶದಲ್ಲಿ ಕಾರ್ಮಿಕ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸೇರಿ ನಾನಾ ಕಡೆಗಳಿಂದ ಬಂದಿದ್ದ ಹಳೇ ವಿದ್ಯಾರ್ಥಿ, ಕಾರ್ಮಿಕರು, ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಕ್ಕರೆ ಕಾರ್ಖಾನೆ ಕಾರ್ಮಿಕ, ಹಳೇ ವಿದ್ಯಾರ್ಥಿಗಳಾದ ಪಿ.ಸತೀಶ, ಹನುಮಂತರೆಡ್ಡಿ, ಎನ್.ಚಂದ್ರಕಾಂತರೆಡ್ಡಿ, ರಾಮಸಿಂಗ್, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net