ಸರ್ಕಾರ ಕುಂದಣಗಾರ ಪ್ರತಿಷ್ಠಾನ ಸ್ಥಾಪಿಸಲಿ

18 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆ.ಜಿ. ಕುಂದಣಗಾರ ಇವರ ಬದುಕು ಬರಹ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅಗತ್ಯ ಎಂದು ಸಾಮಾಜಿಕ ಚಿಂತಕ ಅರವಿಂದ ದಳವಾಯಿ ಹೇಳಿದರು.
ಕೆ.ಜಿ. ಕುಂದಣಗಾರ ದತ್ತಿ, ವಿಠ್ಠಲ ಕಮ್ಮಾರ ಮತ್ತು ಲಲಿತಾ ವಿಠ್ಠಲ ಕಮ್ಮಾರ ದತ್ತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಇಲ್ಲಿನ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಜಿ. ಕುಂದಣಗಾರ ಪ್ರತಿಷ್ಠಾನವನ್ನು ಕರ್ನಾಟಕ ಸರ್ಕಾರ ಸ್ಥಾಪನೆ ಮಾಡಲಿ. ಈ ವಿಷಯಕ್ಕಾಗಿ ಹೋರಾಟ ನಡೆಸಿದಲ್ಲಿ ಬೆಂಬಲವಿದೆ ಎಂದರು.
ಡಾ. ಶಶಿಧರ ತೋಡಕರ ಮಾತನಾಡಿ, ಬಡತನ, ಸಾಕಷ್ಟು ಏಳು ಬೀಳುಗಳ ನಡುವೆ ಬಾಳಿದವರು ಕುಂದಣಗಾರರು. ಕರ್ನಾಟಕ ಕಾಲೇಜಿನ ಪ್ರಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ನೆನೆಯುವುದೇ ನಮ್ಮ ಸೌಭಾಗ್ಯ ಎಂದರು.
ಪ್ರಕಾಶ ಉಡಕೇರಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮೇಯರ್​ ರಾಮಣ್ಣ ಬಡಿಗೇರ, ಮಹದೇವ ಹೊರಟ್ಟಿ, ಸುರೇಶ ಬೇದರೆ, ಕಾಳಪ್ಪ ಬಡಿಗೇರ, ಈರಣ್ಣ ಪತ್ತಾರ, ಡಾ.ಜಗದೀಶ ಬರಗಿ ಅವರಿಗೆ ಸನ್ಮಾನಿಸಲಾಯಿತು.
ವಿಠ್ಠಲ ಕಮ್ಮಾರ, ಲಲಿತಾ ಕಮ್ಮಾರ, ಚಿಂತಾಮಣಿ ಪತ್ತಾರ, ಶಾಂತವೀರ ಬೆಟಗೇರಿ, ವಿ.ಆರ್​. ಬಡಿಗೇರ. ಡಾ. ವೆಂಕಟೇಶ ಮಾಚಕನೂರ, ಶ್ರೀಧರ ಕುಲಕರ್ಣಿ, ಸುಧಾ ಕಬ್ಬೂರ, ಸುವರ್ಣ ಸುರಕೋಡ, ಇತರರು ಇದ್ದರು.
ಡಾ.ಎಸ್​.ಎಸ್​. ದೊಡಮನಿ ನಿರೂಪಿಸಿದರು. ಮಹಾಂತೇಶ ನರೇಗಲ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net