

ಹೊಳೆಆಲೂರ: ಕರ್ನಾಟಕವು ಹತ್ತಾರು ಪರಂಪರೆಗಳಿಗೆ ಆಶ್ರಯ ತಾಣವಾಗಿದೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ವಿ. ಬ್ಯಾಡಗಿ ಹೇಳಿದರು.
ಗ್ರಾಮದ ಕಲಾ ರಸಿಕ ಮಿತ್ರ ಮಂಡಳಿಯ ವತಿಯಿಂದ ಪರಿವರ್ತನೆ ಅಕಾಡೆಮಿಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಲಾ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ನಾಡಿನ ಕಲೆ, ಸಂಸ್ಕೃತಿ ಉಳಿಯಬೇಕಾದರೆ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರವಚನಕಾರ ಪ್ರಲ್ಹಾದ ಮುಂಡಾಸದ ಮಾತನಾಡಿ, ಚಾಲುಕ್ಯರು, ವಿಜಯನಗರದ ಸಾಮ್ರಾಟರು, ಮೈಸೂರು ಅರಸರು ರಂಗಭೂಮಿ, ಚಿತ್ರಕಲೆ, ಯಕ್ಷಗಾನ, ಜಾನಪದ, ಸಂಗೀತ ಹಾಗೂ ಸಾಹಿತ್ಯ ಕಲಾ ಪ್ರಕಾರಗಳನ್ನು ಪೋಷಿಸಿ ಬೆಳೆಸಿದ ಕಾರಣ ಕರ್ನಾಟಕ ಶ್ರೀಮಂತ ಪರಂಪರೆ ಹೊಂದುವಂತಾಗಿದೆ. ಕಲಾವಿದರಿಗೆ ಸಾಕಷ್ಟು ವೇದಿಕೆಗಳು ಅವಕಾಶ ಕಲ್ಪಿಸಿದ್ದು, ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಪೂರಕವಾಗುವಂತೆ ಸೇವೆ ಸಲ್ಲಿಸಬೇಕು ಎಂದರು.
ಮೇಗೂರಿನ ಮಂಜುನಾಥ ಬಸರಕೋಡ, ಬೆನಹಾಳದ ಶರಣಯ್ಯ ಹಳ್ಳೂರು, ಮೆಣಸಗಿಯ ಶಾಂತನಗೌಡ ಗೋಲಗೌಡ್ರ, ಮುಸಿಗೇರಿಯ ಬಸವರಾಜ ಗುಡದೂರ, ಹೊಳೆಹಡಗಲಿಯ ಬಸವರಾಜ ಮಣ್ಣೂರು, ಮೆಣಸಗಿಯ ಸುನೀಲ ಎಲಿಗಾರ, ನೀಲಪ್ಪ ಹಡಪದ, ಬೂದಿಹಾಳ ಗ್ರಾಮದ ಮೈಲಾರಿ ಬಾರಕೇರ, ಅಸೂಟಿಯ ಪಾಂಡು ಬಂಡಿವಡ್ಡರ, ಹೊಳೆಆಲೂರಿನ ಎಲ್ಲೋಸಾ ಪವಾರ, ಕುಮಾರ ವಸ್ತ್ರದ, ಸೌಮ್ಯಾ ಉಡುಪಿ, ಚಿನ್ನು ಹುಲ್ಯಾಳ, ಸೀಮಾ ವಿಜಯಪೂರ ಅವರನ್ನು ಸನ್ಮಾನಿಸಲಾಯಿತು.
ಕಲಾ ರಸಿಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ ನಾಗರಾಜ ಲಿಂಗಸೂರು, ಅಧ್ಯಕ್ಷ ಎಫ್.ಎಸ್. ಚಿಕ್ಕಮಣ್ಣೂರ, ಗೌರವ ಕಾರ್ಯದರ್ಶಿ ವೀರಯ್ಯ ವಸ್ತ್ರದ, ಸಾಹಿತಿ ಎಸ್.ಕೆ. ಆಡಿನ, ಹನಮಂತ ನವಲಳ್ಳಿ, ಸಚಿನಕುಮಾರ ಭಿಕ್ಷಾವತಿಮಠ ಉಪಸ್ಥಿತರಿದ್ದರು.