ಸರ್ಕಾರಿ ನೌಕರರು ಜನರಿಗೆ ಸ್ಪಂದಿಸಲಿ

IMG_20231104_142448
ಸಂತೆ ಶಿವರ ಗ್ರಾಮ ಪಂಚಾಯಿತಿ ಪಿಡಿಒ ಹರೀಶ್ ನಿವೃತ್ತರಾದ ಹಿನ್ನೆಲೆಯಲ್ಲಿ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಪಟೇಲ್ ಗಂಗೇಗೌಡ ಗೀತಾ ಸೋಮಶೇಖರ್, ಕಾಂತರಾಜ್, ಶಿವರಾಜ್ ಇತರರಿದ್ದರು.
Published on

ನುಗ್ಗೇಹಳ್ಳಿ: ಕೆಲಸ ಮಾಡುವ ಹುದ್ದೆಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲು ಸರ್ಕಾರಿ ನೌಕರರು ಕಾರ್ಯೊನ್ಮುಖರಾಗಿ ರೈತರು ಜನಸಾಮಾನ್ಯರಿಗೆ ಸ್ಪಂದಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಟೇಲ್ ಗಂಗೇಗೌಡ ತಿಳಿಸಿದರು.

ಹೋಬಳಿಯ ಸಂತೆ ಶಿವರ ಗ್ರಾಮ ಪಂಚಾಯಿತಿಯಲ್ಲಿ ನಿವೃತ್ತರಾದ ಪಿಡಿಒ ಹರೀಶ್ ಅವರಿಗೆ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದ ಹಳ್ಳಿಯ ರೈತರ ಸಮಸ್ಯೆಗಳಿಗೆ ಏಳು ವರ್ಷದಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಹರೀಶ್ ಅವರು ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಜನಸಾಮಾನ್ಯರ ಮೆಚ್ಚುಗೆ ಪಡೆದಿರುವುದಕ್ಕೆ ಶ್ಲಾಘಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸೋಮಶೇಖರ್, ಉಪಾಧ್ಯಕ್ಷೆ ನಿಂಗಮ್ಮ, ಪಿಡಿಒ ಕೃಷ್ಣೇಗೌಡ, ಕಾರ್ಯದರ್ಶಿ ಮಲ್ಲೇಶ್, ಸದಸ್ಯರಾದ ಮಧು ಪಟೇಲ್, ಬೆಳಗುಲಿ ಲೋಕೇಶ್, ಹೊಸಳ್ಳಿ ಲೋಕೇಶ್, ಕೃಷ್ಣ, ಕುಮಾರ್, ನಾಗರತ್ನ, ಶಿವಕುಮಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಳ್ಳೇಗೌಡ, ಮಾಜಿ ಉಪಾಧ್ಯಕ್ಷ ಶಿವರಾಜ್, ಸ್ವಾಮಿಗೌಡ, ಕಾಂತರಾಜ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net