ಸರ್ಕಾರ ಚಾಲಕರ ನೆರವಿಗೆ ಬರಲಿ

27 BIRUR 02
Published on

ಬೀರೂರು: ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿರುವ ಚಾಲಕರಿಗೆ ಸರ್ಕಾರದ ಯಾವುದೇ ನೆರವು ದೊರೆಯುತ್ತಿಲ್ಲ ಎಂದು ಡ್ರೈವರ್ಸ್‌ ಮತ್ತು ಓನರ್ಸ್‌ ವೆಲ್‌ೇರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸುಗುಟೂರು ಮಂಜುನಾಥ್ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಗೌರವ ಸ್ವೀಕರಿಸಿ ಮಾತನಾಡಿ, ರೈತ ಬೆಳೆದ ತನ್ನ ಬೆಳೆ ಸಾಗಿಸುವ ಚಾಲಕ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾನೆ. ಅಂತಹ ಚಾಲಕರಿಗೆ ಸರ್ಕಾರ ಮರಣ ಪರಿಹಾರ ನಿಧಿಯಾಗಿ 5ಲಕ್ಷ ರೂ.ಘೋಷಿಸಿದ್ದು, ಅದನ್ನು ಹೆಚ್ಚುವರಿ ಮಾಡಬೇಕು. ಚಾಲಕರು ಹದಯಾಘಾತದಿಂದ ಮೃತಪಟ್ಟರೆ ಅದನ್ನು ಅಪಘಾತವೆಂದು ಪರಿಗಣಿಸಿ ಪರಹಾರ ನೀಡಬೇಕು ಎಂದು ಮನವಿ ಮಾಡಿದರು.
ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಉಚಿತ ವಿದ್ಯಾಭ್ಯಾಸ ನೀಡಲು ಆದೇಶ ನೀಡಬೇಕು. ಗ್ಯಾಸ್,ಪೆಟ್ರೋಲ್ ಟ್ಯಾಂಕರ್‌ನಂತಹ ಭಾರಿ ವಾಹನ ಚಾಲಕರಿಗೆ ಅಪಘಾತ ಸಂದರ್ಭದಲ್ಲಿ ವಿಶೇಷವಾಗಿ ಒಂದು ಕೋಟಿಯವರೆಗೆ ಪರಿಹಾರ ನೀಡಬೇಕು. ದೇಶದಲ್ಲಿ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕ್ಷೇತ್ರದಂತೆ ಚಾಲಕರ ದಿನಕ್ಕಾಗಿ ಒಂದು ದಿನ ಗುರುತಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಡ್ರೈವರ್ಸ್‌ ಮತ್ತು ಓನರ್ಸ್‌ ವೆಲ್‌ೇರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಮುರುಗೇಶ್ ಮಾತನಾಡಿ, ನಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಸಂಘ ಸಹಕಾರಿಯಾಗಿದೆ. ಶುಲ್ಕ ರಹಿತವಾಗಿ ಸದಸ್ಯತ್ವವನ್ನು ಯಾವುದೇ ಮಾಡಿಕೊಳ್ಳಲಾಗುತ್ತಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸದಾಶಿವ, ಪದಾಧಿಕಾರಿಗಳಾದ ರಮೇಶ್, ಅಶೋಕ, ಸುನಿಲ್, ಗೋವಿಂದ, ರಾಜು, ಕೇಶವ ಮೂರ್ತಿ, ಗುರು, ಶ್ರೀಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net