ಸರ್ಕಾರ ನೋಂದವರ ನೆರವಿಗೆ ನಿಲ್ಲಲಿ

22Kush01
Published on

ಕುಶಾಲನಗರ: ರಾಜ್ಯ ಸರ್ಕಾರ ನೋಂದವರ ನೆರವಿಗೆ ಬರಬೇಕು. ಆ ಮೂಲಕ ಅವರಲ್ಲಿ ಭರವಸೆ ಮೂಡಿಸಬೇಕು ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಆಗ್ರಹಿಸಿದರು.


ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ, ನೋಂದವರಿಗೆ ಸಾಂತ್ವನ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಂಪೂರ್ಣ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ಮತ್ತು ಭಾಗಶಃ ಕಳೆದುಕೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ಕೇವಲ ಬಿಟ್ಟಿ ಭಾಗ್ಯಗಳಿಗೆ ಅನುದಾನ ಮಿಸಲಿಟ್ಟು ಬಡ ವರ್ಗದ ಜನರಿಗೆ ದ್ರೋಹವೆಸಗುತ್ತಿದೆ ಎಂದು ಲೇವಡಿ ಮಾಡಿದರು. ಒಂದೇ ಸಾರಿ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಕಂತುಗಳಲ್ಲಿ ಆದರೂ ನೀಡಬೇಕೆಂದು ಆಗ್ರಹಿಸಿದರು.


ನಮ್ಮ ಅವಧಿಯಲ್ಲಿ ಕಾವೇರಿ ನದಿಯಿಂದ ಪ್ರವಾಹ ಬಾರದಂತೆ ತಡೆಗಟ್ಟಲು ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಿ, ಅದಕ್ಕೆ ಬೇಕಾದ ಅನುದಾನವನ್ನು ತರುವಲ್ಲಿ ಯಶಸ್ಸು ಆಗಿದ್ದೆವು. ಅದರ ನಂತರ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ ಎಂದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಿದರು.


ಕುಶಾಲನಗರ ಬಿಜೆಪಿ ನಗರಾಧ್ಯಕ್ಷ ಚರಣ್, ಕಾರ್ಯದರ್ಶಿ ಮಧುಸೂದನ್ ಮತ್ತಿತರ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net