

ಬೈಲಹೊಂಗಲ: ಅತಿವೃಷ್ಟಿಯಿಂದ ರೈತರು ಕಂಗೆಟ್ಟಿದ್ದು, ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂ ಮತ್ತು ಕೂಲಿ ಕಾರ್ಮಿಕರ ಹಿತಾಸಕ್ತಿ ಸಂ ವತಿಯಿಂದ ಪಟ್ಟಣದಲ್ಲಿ ಉಪವಿಭಾಗಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಂದ ಅಧ್ಯಕ್ಷ ಮಹಾಂತೇಶ ಕಮತ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಪರಿಣಾಮ ರೈತರ ಹೆಸರು, ಸೊಯಾಬೀನ್, ಹತ್ತಿ, ಉದ್ದು, ಕಬ್ಬು ಮತ್ತು ತರಕಾರಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಕೂಡಲೇ ಖರೀದಿ ಕೇಂದ್ರ ತೆರೆದು ಹಾನಿಗೀಡಾದ ಹೆಸರು ಖರೀದಿಸಬೇಕು. ಸಾಲ ವಸೂಲಾತಿಗಾಗಿ ಬ್ಯಾಂಕ್ಗಳು ನೀಡುತ್ತಿರುವ ಕಿರುಕುಳ ಅಂತ್ಯವಾಗಬೇಕು ಎಂದು ಒತ್ತಾಯಿಸಿದರು.
ಸವದತ್ತಿ ಎಪಿಎಂಸಿ ಮಾಜಿ ಅಧ್ಯ ಎ್.ಎಸ್.ಸಿದ್ದನಗೌಡರ ಮಾತನಾಡಿ, ಅತಿವೃಷ್ಟಿಯಿಂದ ರೈತರ ಜಮೀನು ಮತ್ತು ಬೆಳೆಗಳು ಹಾನಿಯಾಗಿವೆ. ಹೀಗಾಗಿ, ನರೇಗಾ ಯೋಜನೆಯಡಿ ಪ್ರತಿ ಎಕರೆಗೆ 50 ಕೃಷಿ ಕೂಲಿಕಾರ್ಮಿಕರನ್ನು ನೀಡಬೇಕು ಎಂದರು.
ಮುಖಂಡರಾದ ಸುರೇಶ ಸಂಪಗಾಂವ, ಅಶೋಕ ಕಳಸಣ್ಣವರ, ಮುರಗೇಶ ಗೂಂಡ್ಲೂರ, ಬಸವರಾಜ ದುಗ್ಗಾಣಿ, ಉಳವಪ್ಪ ಕಲಭಾಂವಿ, ರಾಯಣ್ಣ ಮಾವಿನಕಟ್ಟಿ, ಮಡಿವಾಳಪ್ಪ ಚಿಕ್ಕೊಪ್ಪ, ಮಹಾಂತೇಶ ವಿವೇಕಿ, ಪರಶುರಾಮ ರಾಯಬಾಗ ಇತರರಿದ್ದರು.