

ಸೋಮವಾರಪೇಟೆ: ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆ ಮತ್ತು ದೇವಾಲಯಗಳ ರಕ್ಷಣೆ ಮಾಡಲು ಕೂಡಲೇ ಭಾರತ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ಚಳವಳಿ ಹಿಂಸಾರೂಪಕ್ಕೆ ತಿರುಗಿ, ಸರ್ಕಾರ ವಿರೋಧಿ ಚಳವಳಿಯಾಗಿ ಈಗ ಹಿಂದುಗಳ ವಿರುದ್ಧ ತಿರುಗಿ ಹಿಂಸಾಚಾರ ನಡೆಯುತ್ತಿದೆ. 22 ಸ್ಥಳಗಳಲ್ಲಿ ಹಿಂದುಗಳನ್ನು ಗುರುಯಾಗಿರಿಸಿಕೊಂಡು, ಅವರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರಿಗೆ ಸೇರಿದ ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡುವುದು ಮತ್ತು ದೇವಾಲಯಗಳನ್ನು ಧ್ವಂಸ ಮಾಡುವ ಕೆಲಸ ನಡೆಯುತ್ತಿದೆ. ಹಿಂದು ಸಮಾಜ ಮತ್ತು ದೇವಾಲಯಗಳ ರಕ್ಷಣೆಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಂಬಂಧಿಸಿದ ಮನವಿಯನ್ನು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.
ಮನವಿ ಸಲ್ಲಿಸುವ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ.ಮಧು, ಮಂಜುನಾಥ್ ಶಿಲ್ಪಿ, ಪ್ರಸಾದ್, ಡಿ.ಡಿ.ಪವಿತ್ರಾ, ರಜಿನಿ, ನಿಖಿಲ್, ಕೆ.ಎನ್. ತೇಜಸ್ವಿ ಹಾಗು ತೇಜು ಇದ್ದರು.