ಸರ್ಕಾರ ಶಿಕ್ಷಣ ದಿನವನ್ನಾಗಿ ಆಚರಿಸಲಿ

ತಲಕಾಡು ಗ್ರಾಮದಲ್ಲಿರುವ ಲೋಕೋಪಯೋಗಿ ಅತಿಥಿಗೃಹ ಸಭಾಂಗಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಲಗೂಡು ಶಿವಕುಮಾರ್, ಕುಕ್ಕೂರುರಾಜು, ಯಾಚೇನಹಳ್ಳಿ ಸೋಮಶೇಖರ್, ನಾಗರಾಜ್ ಮೂರ್ತಿ, ಪರಮೇಶ್, ಸುಂದರ್‌ನಾಯಕ, ಸುಬ್ಬನಾಯಕ ಇದ್ದರು.
ತಲಕಾಡು ಗ್ರಾಮದಲ್ಲಿರುವ ಲೋಕೋಪಯೋಗಿ ಅತಿಥಿಗೃಹ ಸಭಾಂಗಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಲಗೂಡು ಶಿವಕುಮಾರ್, ಕುಕ್ಕೂರುರಾಜು, ಯಾಚೇನಹಳ್ಳಿ ಸೋಮಶೇಖರ್, ನಾಗರಾಜ್ ಮೂರ್ತಿ, ಪರಮೇಶ್, ಸುಂದರ್‌ನಾಯಕ, ಸುಬ್ಬನಾಯಕ ಇದ್ದರು.
Published on

ತಿ.ನರಸೀಪುರ: ಸ್ವಾತಂತ್ರೃ ಪೂರ್ವದಲ್ಲಿಯೇ ದೇಶದಲ್ಲಿನ ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರಿಗೆ ನಿರ್ಬಂಧವಿದ್ದರೂ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ನೀಡಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಎಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಬಣ್ಣಿಸಿದರು.

ತಾಲೂಕಿನ ತಲಕಾಡು ಗ್ರಾಮದಲ್ಲಿರುವ ಲೋಕೋಪಯೋಗಿ ಅತಿಥಿಗೃಹ ಸಭಾಂಗಣದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಅವರ 194 ನೇ ಜನ್ಮದಿನ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬ್ರಾಹ್ಮಣ ಮಹಿಳೆಯರನ್ನು ಒಳಗೊಂಡಂತೆ ಶಿಕ್ಷಣದಿಂದ ವಂಚಿತರಾಗಿದ್ದ ಶೂದ್ರ ಮತ್ತು ಅಸ್ಪೃಶ್ಯ ಮಹಿಳೆಯರಿಗೆ 19ನೇ ಶತಮಾನದಲ್ಲಿ ಹತ್ತಾರು ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಸರ್ಕಾರ ಶಿಕ್ಷಣ ದಿನವನ್ನಾಗಿ ಆಚರಿಸಬೇಕು ಎಂದು ಒತ್ತಾಯಿಸಿದರು.

ಫುಲೆ ದಂಪತಿ ಬ್ರಿಟಿಷ್ ಸರ್ಕಾರದ ಸಹಕಾರದಿಂದ ಅಕ್ಷರ ಜ್ಞಾನ ನೀಡುವ ಜತೆಗೆ ಸತ್ಯಶೋಧಕ ಸಮಾಜ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಜನರಲ್ಲಿ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿತು. ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣದ ಜತೆಗೆ ಸಾಮಾಜಿಕ ವಾಗಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುನ್ನುಡಿಯಾಗಿದ್ದರು ಎಂದು ಸ್ಮರಿಸಿದರು.

8ರಂದು ಪ್ರತಿಭಟನೆ: ಕಾರ್ಯಕ್ರಮದ ಬಳಿಕ ನಡೆದ ದಸಂಸ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಜ.8 ರಂದು ತಲಕಾಡು ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಷಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ದೇಶದ್ರೋಹ ಕಾಯ್ದೆಯಡಿ ಬಂಧನಕ್ಕೆ ಆಗ್ರಹಿಸಿ ಅಂದು ಬೆಳಗ್ಗೆ 11 ಗಂಟೆಗೆ ಗ್ರಾಮದ ಶ್ರೀ ಬಂಡರಸಮ್ಮ ದೇವಾಲಯ ಆವರಣದಿಂದ ನಾಡಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಣಯಿಸಲಾಯಿತು.

ದಸಂಸ ತಾಲೂಕು ಸಂಚಾಲಕರಾದ ಕುಕ್ಕೂರು ರಾಜು, ಯಾಚೇನಹಳ್ಳಿ ಸೋಮಶೇಖರ್, ಸಂಘಟನಾ ಸಂಚಾಲಕರಾದ ಕಿರಗಸೂರು ರಜನಿ, ಹಿರಿಯೂರು ಸೋಮಣ್ಣ, ತಲಕಾಡು ಗ್ರಾಪಂ ಉಪಾಧ್ಯಕ್ಷ ನಾಗರಾಜ್ ಮೂರ್ತಿ, ಹೊಳೆಸಾಲು ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್, ಸದಸ್ಯರಾದ ಸುಂದರ್‌ನಾಯಕ, ಸುಬ್ಬನಾಯಕ, ಬಣವೆ ಶಶಿ, ಪಿಎಲ್ಡಿ.ಬ್ಯಾಂಕ್ ಉಪಾಧ್ಯಕ್ಷ ಬಿ.ಎಂ.ಲಿಂಗರಾಜು, ಮುಖಂಡರಾದ ಸಿದ್ದರಾಜು, ಮಾವಿನಹಳ್ಳಿ ಕುಮಾರ್, ಎಂ.ಬಿ.ಲಿಂಗರಾಜು, ವಡೆಯಾಂಡಳ್ಳಿ ಗಣೇಶ, ಮಹದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net