ಆಡಳಿತ ಮಂಡಳಿ ಜಾವಾಬ್ದಾರಿಯಿಂದ ಕಾರ್ಯನಿರ್ವಹಿಸಲಿ

Let the governing body act responsibly
ಬಾದಾಮಿ ಪಟ್ಟಣದ ರೋಣದ ಬಿಲ್ಡಿಂಗ್‌ನಲ್ಲಿ ಬಾಗಲಕೋಟೆ ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಮೂರನೇ ಶಾಖೆಯನ್ನು ಮಹಾಂತೇಶ ಮಮದಾಪೂರ ಉದ್ಘಾಟಿಸಿದರು. ಅಧ್ಯಕ್ಷ ಆರ್.ಎಸ್. ಪಾಟೀಲ, ಮುಕಾನಿ ರಾಜಶೇಖರ ಕುರ್ತಕೋಟಿ, ಶಿವಪೂಜಾ ಶಿವಾಚಾರ್ಯರು, ಸಹಾಬುದ್ದೀನ್ ಜಾಲಿಹಾಳ ಅಜ್ಜನವರು, ವಿ.ಟಿ. ಪೂಜಾರ ಇತರರಿದ್ದರು.
Published on

ಬಾದಾಮಿ: ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದಾಗ ಸಹಕಾರಿ ಸಂಘಗಳು ಯಶಸ್ವಿ ಹೊಂದಲು ಸಾಧ್ಯ ಎಂದು ಪಿ.ಎಲ್.ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಹೇಳಿದರು.

ನಗರದಲ್ಲಿ ರೋಣದ ಬಿಲ್ಡಿಂಗ್‌ನಲ್ಲಿ ಬುಧವಾರ ಪ್ರಾರಂಭವಾದ ಬಾಗಲಕೋಟೆ ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಮೂರನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಬ್ಯಾಂಕಿನ ಹಿತ ಕಾಪಾಡಬೇಕು. ಸಹಕಾರಿ ತತ್ವದ ಮೇಲೆ ಕಾನೂನು ಚೌಕಟ್ಟಿನಲ್ಲಿ ಸಾಲ ದೊರೆಯುತ್ತದೆ. ಸಾಲಗಾರರು ಸಕಾಲಕ್ಕೆ ಮರು ಪಾವತಿಸುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಹೇಳಿದರು.

ಅಧ್ಯಕ್ಷ ರಾಜಶೇಖರ ಎಸ್. ಪಾಟೀಲ ಮಾತನಾಡಿ, ಈಗಾಗಲೇ ಬಾಗಲಕೋಟೆಯಲ್ಲಿ ಬಸವಶ್ರೀ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ ಎರಡು ಶಾಖೆಗಳು ಮಂಜೂರು ಆಗಿದ್ದವು. ಅದರಲ್ಲಿ ಬಾದಾಮಿಯಲ್ಲಿ ನೂತನ ಮೂರನೇ ಶಾಖೆ ಆರಂಭಿಸಲಾಗಿದೆ. ಶೀಘ್ರ ನಾಲ್ಕನೆ ಶಾಖೆಯನ್ನು ಕೆರೂರದಲ್ಲಿ ಆರಂಭಿಸಲಾಗುವುದು. ಯಾವುದೇ ಒಂದು ಹಣಖಾಸು ಸಂಸ್ಥೆ ಅಭಿವೃದ್ಧಿಯಾಗಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ಠೇವುಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುವುದು. ಬ್ಯಾಂಕ್ 1,885 ಸದಸ್ಯರನ್ನು ಹೊಂದಿದ್ದು, 60.50 ಲಕ್ಷ ರೂ. ಶೇರು, 20 ಕೋಟಿ ರೂ. ದುಡಿಯುವ ಬಂಡವಾಳ, 18 ಕೋಟಿ ರೂ. ಠೇವಣಿ, 14 ಕೋಟಿ ರೂ. ಸಾಲ ವಿತರಿಸುವ ಮೂಲಕ 9.11 ಲಕ್ಷ ರೂ. ಲಾಭ ಗಳಿಸಿದೆ ಎಂದರು.

ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ಮತ್ತು ಹೆಬ್ಬಳ್ಳಿ ಸಹಾಬುದ್ದೀನ್ ಜಾಲಿಹಾಳ ಅಜ್ಜನವರು ಆಶೀರ್ವಚನ ನೀಡಿದರು. ಎಸ್.ಆರ್. ಪಾಟೀಲ, ವಿ.ಟಿ. ಪೂಜಾರ, ಪಿ.ಎ. ಹುನಗುಂದ, ಎಸ್.ಎಸ್. ನೀರಲಗಿ, ಎಂ.ಎಸ್. ರುದ್ರಗೌಡರ, ಆರ್.ಪಿ. ಹುಣಸಿಗಿಡದ, ರಾಜೇಶ ಪಟೇಲ, ಅಮರಯ್ಯ ಜಟಗಿಮಠ, ಮು.ಕಾ.ನಿ. ರಾಜಶೇಖರ ಕುರ್ತಕೋಟಿ, ಶಾಖಾ ವ್ಯವಸ್ಥಾಪಕ ಆರ್.ಎ. ಮೇಟಿಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net