ಸಾಧನೆಗೆ ಹಿಂದೆ ಗುರು ಮುಂದೆ ಗುರಿ ಇರಲಿ

Let the goal be in front of the teacher and the goal behind the achievement.
Published on

ವಿಜಯಪುರ : ವಿದ್ಯಾರ್ಥಿಗಳು ಹಿಂದೆ ಗುರು, ಮುಂದೆ ಗುರಿಯನ್ನಿರಿಸಿ ಮುನ್ನಡೆಯಬೇಕು. ಅಂದಾಗಲೇ ಸಾಧನೆ ಮಾಡಲು ಎಂದು ಶಾಲೆಯ ಪ್ರಾಚಾರ್ಯ ರಿಜೇಶ ಪಿ.ಎನ್​ ಹೇಳಿದರು.

ನಗರದ ಶಾಂತಿನಿಕೇತನ ಸಿಬಿಎಸ್​ಸಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ವ್ಯಾಸ ಮಹರ್ಷಿ ಮತ್ತು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಗುರುವಿಗೆ ಗೌರವಿಸಬೇಕು. ಜೀವನದಲ್ಲಿ ಗುರುವಿನ ಸಲಹೆಗಳ ಮೂಲಕ ಮುನ್ನಡೆದರೆ ವಿದ್ಯಾರ್ಥಿ ಜೀವನ ಯಶಸ್ವಿಯಾಗಲಿದೆ. ನಿತ್ಯವೂ ಶಾಲೆಗೆ ಬರುವಾಗ ಪಾಲಕರ ನಮಸ್ಕರಿಸುವ ಜತೆಗೆ ಅವರ ಆಶೀರ್ವಾದ ಪಡೆದು ಆಗಮಿಸಬೇಕು. ಅದು ವಿದ್ಯಾರ್ಥಿ ಜೀವನದಲ್ಲಿ ಅಭಿವೃದ್ಧಿಗೊಳ್ಳಲು ಸಹಾಯವಾಗಲಿದೆ ಎಂದರು.

ನಂತರ ಸಾಂಸತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿನಿ ಜಾಹ್ನವಿ ಡಬ್ಬಿ ಗುರುಪೂರ್ಣಿಮೆ ಮಹತ್ವದ ಕುರಿತು ಮಾತನಾಡಿದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net