ಗಂಗಾ ಸೊಸೈಟಿ ಮಾದರಿಯಾಗಲಿ

h16-ganga bank
Published on

ಹುಬ್ಬಳ್ಳಿ: ನಗರದ ಕೋರ್ಟ್ ಸರ್ಕಲ್ ಬಳಿಯ ಗಂಗಾ ಸೊಸೈಟಿ ಕಚೇರಿಯಲ್ಲಿ ಇತ್ತೀಚೆಗೆ 30ನೇ ವಾರ್ಷಿಕ ಮಹಾಸಭೆ ಏರ್ಪಾಟಾಗಿತ್ತು.

ಮುಖ್ಯ ಆತಿಥಿ ಮೋಹನ ಹರಪನಹಳ್ಳಿ ಮಾತನಾಡಿ, 2024-25ನೇ ಸಾಲಿನಲ್ಲಿ 20 ಲಕ್ಷ ರೂ. ಲಾಭ ಗಳಿಸಿ ಸಂಘದ ಸದಸ್ಯರಿಗೆ ಶೇ. 12ರಷ್ಟು ಡಿವಿಡೆಂಡ್ ನೀಡಿರುವುದು ಸಂತಸ ತಂದಿದೆ. ಈ ಸೊಸೈಟಿಯು ಮಾದರಿಯಾಗಿ ಬೆಳೆಯಲಿ ಎಂದರು.

ಅತಿಥಿ ಬಸವರಾಜ ಗುರ್ಕಿ ಮಾತನಾಡಿ, ಸಹಕಾರಿ ಸಂಘಗಳು ಅನೇಕ ಸಮಸ್ಯೆ ಎದುರಿಸುತ್ತಿವೆ. ಇದರಲ್ಲಿ ಗಂಗಾ ಸೊಸೈಟಿ ಬೆಳವಣಿಗೆ ಅತ್ಯದ್ಭುತವಾಗಿದೆ ಎಂದರು.

ಸೊಸೈಟಿ ಅಧ್ಯಕ್ಷ ಹನುಮಂತಪ್ಪ ನಾಯ್ಕೋಡಿ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಓದಿದರು.

ವೈ.ಆರ್. ಗೇಟಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಿರ್ದೇಶಕರಾದ ಆರ್.ಎಂ. ಹರಪನಹಳ್ಳಿ, ಪಿ.ಡಿ. ನಾಟೆಕಾರ, ಸಿ.ಜಿ. ಗಂಗಪ್ಪನವರ, ಎಸ್.ಎಂ. ದೇವಗಿರಿ, ಬಿ.ಎನ್. ತಹಶೀಲ್ದಾರ, ಬಿ.ಎಚ್. ಅಡಿವೆಣ್ಣವರ, ಎಸ್. ಜೆ. ಏಕಬೋಟೆ, ಪಿ. ಕೇಶವಲು, ಪಿ.ಎಸ್. ಧರ್ಮಣ್ಣವರ, ಆರ್.ಕೆ. ನಾಟಿಕಾರ ಉಪಸ್ಥಿತರಿದ್ದರು.

ಬಿ.ಎಲ್. ತಮ್ಮಣ್ಣಯ್ಯ ಸ್ವಾಗತಿಸಿದರು. ಸೊಸೈಟಿ ಉಪಾಧ್ಯಕ್ಷ ಎಲ್.ಜಿ. ಅಂಬಿಗೇರ ನಿರೂಪಿಸಿದರು. ಎನ್.ಎಂ. ಮಡ್ಡೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net