ಬೈಲಹೊಂಗಲದಲ್ಲೂ ಉತ್ಸವ ಆಚರಿಸಲಿ

16blh1 ಆಗ್ರಹ
Published on

ಬೈಲಹೊಂಗಲ: ಕಿತ್ತೂರು ಉತ್ಸವ ಅಂಗವಾಗಿ ನಗರದ ವೀರರಾಣಿ ಚನ್ನಮ್ಮಾಜಿಯ ಸಮಾಧಿ- ಸ್ಥಳದಲ್ಲಿಯೂ ಪ್ರತಿ ವರ್ಷ ಉತ್ಸವ ಕಾರ್ಯಕ್ರಮ ಆಯೋಜಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ನೇತೃತ್ವದಲ್ಲಿ ಪುರಸಭೆ ಸದಸ್ಯರು ಹಾಗೂ ವಿವಿಧ ಸಂ&ಸಂಸ್ಥೆಗಳ ಪದಾಧಿಕಾರಿಗಳು ನಗರದಲ್ಲಿ ಎಸಿ ಪ್ರವಿಣ ಜೈನ್​ಗೆ ಗುರುವಾರ ಮನವಿ ಸಲ್ಲಿಸಿದರು.

ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ಮಾತನಾಡಿ, ನಗರದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಉತ್ಸವದ ಅಂಗವಾಗಿ ಕಾರ್ಯಕ್ರಮ ಆಯೋಜಿಸದಿರುವುದು ಬೇಸರದ ಸಂಗತಿ. ಕಿತ್ತೂರು ಪ್ರಾಧಿಕಾರ, ಕೆಆರ್​ಐಡಿಎಲ್​ ವತಿಯಿಂದ 4.5 ಕೋಟಿ ರೂ.ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಆದರೆ, ಕಿತ್ತೂರು ಉತ್ಸವದ ಸಂದರ್ಭದಲ್ಲಿ ಚನ್ನಮ್ಮನ ಸಮಾಧಿಯ ಎಲ್ಲ ಅಭಿವೃದ್ಧಿ ಕಾಮಗಾರಿ ಮತ್ತು ರೂಪಕಗಳನ್ನು ಉದ್ಘಾಟಿಸುವಂತೆ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಪುರಸಭೆ ಅಧ್ಯರು, ಸದಸ್ಯರ ಮೇಲೆ ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದರು.

ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ ಮಾತನಾಡಿ, ಅ.23, 24 ಮತ್ತು 25ರಂದು ಚನ್ನಮ್ಮನ ಕಿತ್ತೂರಿನಲ್ಲಿ ಉತ್ಸವ ಆಚರಿಸಲಾಗುತ್ತಿದೆ. ಹೀಗಾಗಿ, ಬೈಲಹೊಂಗಲ ಜನರು ಪ್ರತಿಭಟನೆಗೆ ಮುಂದಾಗುವ ಮುನ್ನವೇ ಐಕ್ಯಸ್ಥಳದಲ್ಲಿ ಉತ್ಸವ ಆಚರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಬೇಕೆಂದು ಒತ್ತಾಯಿಸಿದರು.

ನೇಗಿಲಯೋಗಿ ರೈತ ಸೇವಾ ಸಂದ ಜಿಲ್ಲಾಧ್ಯ ಶಂಕರ ಬೋಳನ್ನವರ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಧ್ಯ ಪ್ರವಿಣ ಮೂಗಿ, ಮಹಾಬಳೇಶ್ವರ ಬೋಳನ್ನವರ ಮಾತನಾಡಿ, ನಗರದ ಚನ್ನಮ್ಮಾಜಿ ಐಕ್ಯಸ್ಥಳದಲ್ಲಿ ಚನ್ನಮ್ಮಾಜಿ ಜೀವನ ಚರಿತ್ರೆ ಸಾರುವ ರೂಪಕ ಅಳವಡಿಸುವ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಸಾರ್ವಜನಿಕರ ವಿಣೆಗೆ ಲಭ್ಯವಾಗದಿರುವುದು ನಿರಾಸೆ ಮೂಡಿಸಿದೆ. ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಕೂಡಲೇ ನವೀಕೃತ ಐತಿಹಾಸಿಕ ಸ್ಥಳವನ್ನು ಉದ್ಘಾಟನೆಗೊಳಿಸಬೇಕೆಂದು ಆಗ್ರಹಿಸಿದರು.

ಕಿತ್ತೂರು ಚನ್ನಮಾಜಿ ಸಮಾಧಿ ಸ್ಥಳದ ಕಾಮಗಾರಿ ಪೂರ್ಣಗೊಳಿಸಬೇಕು. ಕಿತ್ತೂರು ಉತ್ಸವದರೊಳಗೆ ಐತಿಹಾಸಿಕ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ೂಷಣೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪುರಸಭೆ ಉಪಾಧ್ಯ ಬುಡ್ಡೇಸಾಬ್​ ಶಿರಸಂಗಿ, ಸದಸ್ಯರಾದ ಅರ್ಜುನ ಕಲಕುಟಕರ, ಪ್ರಕಾಶ ಕೊಟಬಾಗಿ, ಮಲ್ಲೇಶಪ್ಪ ಹೊಸಮನಿ, ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ, ರಾಜು ಸೊಗಲ, ಶಿವಾನಂದ ಬಡ್ಡಿಮನಿ, ಅದೃಶಪ್ಪ ಹುಚ್ಚನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net