ವಿದ್ಯಾರ್ಥಿನಿಯರು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿ

16 Aln 1 KRIDAKUTA
Published on

ಅಳ್ನಾವರ: ವಿದ್ಯಾರ್ಥಿನಿಯರು ಪ್ರತಿದಿನ ಆಟೋಟಗಳಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಹಿಳಾ ಶಕ್ತಿ ವೇದಿಕೆ ತಾಲೂಕು ಸದಸ್ಯೆ ಲೀಲಾವತಿ ಹಸಬಿಮಠ ಹೇಳಿದರು.

ಪಟ್ಟಣದ ಕಸ್ತೂರ್ಬಾ ಸರ್ಕಾರಿ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡೆಗಳನ್ನು ಹವ್ಯಾಸವಾಗಿ ಅಳವಡಿಸಿಕೊಂಡಲ್ಲಿ ಶರೀರ ಸದೃಢಗೊಂಡು ಚುರುಕಿನ ಬುದ್ಧಿವಂತಿಕೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಶಿಸ್ತು ಬದ್ಧತೆ, ಸಂಸ್ಕಾರ ಹಾಗೂ ಕ್ರಮಬದ್ಧ ಶಿಕ್ಷಣದಿಂದ ಸಮರ್ಥ ಭಾರತ ನಿರ್ವಿುಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿಂತಕಿ ರಾಜೇಶ್ವರಿ ಪಾಟೀಲ, ಮುಖ್ಯಾಧ್ಯಾಪಕಿ ಗೀತಾ ಇಬ್ರಾಹಿಂಪುರ ಮಾತನಾಡಿದರು. ದೀಪಾ ಲಾಡ್, ಎಸ್.ಬಿ. ಅಗಸಿಮನಿ, ಎಸ್.ಬಿ. ಮುರಗೋಡ, ಪಿ.ಬಿ. ದಡವಾದ, ಪೂರ್ಣಿಮಾ ಮುತ್ನಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net