ಸಹೋದರತ್ವ ಭಾವನೆ ಬೆಳೆಯಲಿ

Let the feeling of brotherhood grow
Published on

ಬ್ಯಾಡಗಿ: ಪಟ್ಟಣದ ವಿದ್ಯಾನಗರದ ಹಿಂದು ಮಹಾಸಭಾ ಗಣಪತಿ ಉತ್ಸವ ಮಂಟಪದಲ್ಲಿ ಸಮಿತಿ ವತಿಯಿಂದ ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲ ಹಬ್ಬ, ಉತ್ಸವ ಇತ್ಯಾದಿಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ಹೋಗಬೇಕಿದೆ. ಸಮಾಜದಲ್ಲಿ ಎಲ್ಲರೂ ಭಾವೈಕ್ಯ ಮೈಗೂಡಿಸಿಕೊಳ್ಳಬೇಕು. ಸಹೋದರತ್ವ ಭಾವನೆಗಳು ಹೆಚ್ಚಾಗಬೇಕಿದೆ. ತಾಂತ್ರಿಕ ಯುಗದಲ್ಲಿ ಇಂದಿಗೂ ಸಂಪ್ರದಾಯ, ಆಚರಣೆಗಳು ಉಳಿದುಕೊಂಡಿದ್ದು, ಭಾರತೀಯರ ಸಂಸ್ಕೃತಿ, ಸಂಸ್ಕಾರಗಳು ಸಮಾಜದಲ್ಲಿ ಮನೆಮಾಡಿವೆ. ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಬಂಡಿವಡ್ಡರ, ವ್ಯವಸ್ಥಾಪಕ ರವಿಕುಮಾರ ಬಿಲ್ಲಳ್ಳಿ, ಸತೀಶ ಕುದ್ರೊಳ್ಳಿ, ಅಭಿಷೇಕ ವಡ್ನಿಕೊಪ್ಪ, ರಾಜು ಬೆಟದೂರು, ಕೆಪಿಸಿಸಿ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಉದ್ದಿಮೆ ನಾಗರಾಜ ಆನ್ವೇರಿ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾ ಎರೆಸೀಮೆ, ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಹರೀಶ ಕುದರಿಹಾಳಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net