

ಹುಕ್ಕೇರಿ: ಜಲ ಮೂಲಗಳಾದ ಕೆರೆ-ಕಟ್ಟೆ, ಹಳ್ಳಕೊಳ್ಳಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಇವು ಆಸರೆಯಾಗುತ್ತವೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರ್ಮನ್ ಪವನ ರಮೇಶ ಕತ್ತಿ ಹೇಳಿದರು.
ತಾಲೂಕಿನ ಶಿರಹಟ್ಟಿ, ಸಾರಾಪುರ, ಹುಲ್ಲೋಳಿ, ಬೆಳವಿಯ 2 ಕೆರೆಗಳು, ಚಿಕ್ಕೋಡಿ ತಾಲೂಕಿನ ಕೆಂಚನಟ್ಟಿ ಕೆರೆಗಳಿಗೆ ಭಾನುವಾರ ಭೇಟಿ ನೀಡಿದ ಬಳಿಕ ಮಾತನಾಡಿದರು. ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಜತೆಗೆ ಬಾವಿ, ಬೋರ್‌ವೆಲ್‌ಗಳ ಅಂತರ್ಜಲ ಹೆಚ್ಚಿಸಲು ಇವು ಪ್ರಮುಖ ಕಾರಣವಾಗುತ್ತವೆ.
ಅದಕ್ಕಾಗಿ ಮಾಜಿ ಸಚಿವ ದಿ.ಉಮೇಶ ಕತ್ತಿ ಪ್ರತಿ ವರ್ಷ ಮಳೆಗಾಲದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಆದರೆ ರೈತರು ಕೆರೆಗಳಿಗೆ ಬರುವ ನೀರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಸರಿಯಲ್ಲವೆಂದರು. ನಿಮ್ಮೂರಿನ ಕೆರೆಗಳಂತೆ ಬೇರೆ ಕೆರೆಗಳಿಗೂ ನೀರು ಹರಿಸುವ ಪೈಪ್‌ಲೈನ್ ಹಾಳು ಮಾಡುತ್ತಿರುವುದು ಅನ್ಯಾಯ. ಇಂತಹ ಕೃತ್ಯಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಳವಿ ಗ್ರಾಪಂ ಸದಸ್ಯ ಸತ್ಯಪ್ಪ ನಾಯಿಕ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ, ಮುಖಂಡರಾದ ಅಣ್ಣಪ್ಪ ಬ್ಯಾಳಿ, ಕೆ.ಜಿ.ಪಾಟೀಲ, ವಕೀಲ ಡಿ.ಕೆ.ಅವರಗೋಳ, ಶಂಕರ ಬಡಗಾಂವಿ, ಸತ್ತೆಪ್ಪ ನಾಯಿಕ, ವಿಶ್ವನಾಥ ನಾಯಿಕ, ಅಪ್ಪಾಸಾಹೇಬ ಸಾರಾಪುರೆ, ಎಂ.ಬಿ.ನಾಯಿಕ, ಸಂಜೀವ ನಾಯಿಕ, ಶಿವನಾಯಿಕ ನಾಯಿಕ, ರಾಮಣ್ಣ ತೇರದಾಳಿ, ಪಿ.ಡಿ.ಚೌಗಲಾ, ಬಸವರಾಜ ಗಂಗನ್ನವರ, ಪ್ರಶಾಂತ ಪಾಟೀಲ, ಅಧಿಕಾರಿಗಳಾದ ಸಾಧಿಕ್ ಮುಲ್ಲಾ, ಸುಭಾಷ ಮಹಿಮಗೋಳ, ಚಂದ್ರಶೇಖರ ಚೌಗಲಾ ಇತರರಿದ್ದರು.