

ಹುನಗುಂದ: ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ತಾಲೂಕಿನ ರೈತರು ಸದುಪಯೋಗಪಡಿಸಿಕೊಳ್ಳ ಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ಗುರುವಾರ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಋತುಮಾನದ ಬೆಳೆಗಳಿಗೆ ಸರ್ಕಾರ ಬೆಂಬಲ ಘೋಷಿಸಿದೆ. ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರೊಂದಿಗೆ ಮಾತನಾಡಿ ರೈತರು ಬೆಂಬಲ ಬೆಲೆಯಡಿ ಸೂರ್ಯಕಾಂತಿ ಮಾರಲು ನೋಂದಣಿಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ಆರ್. ಎಂ. ದಂಡಿನ ಮಾತನಾಡಿ, ಸೂರ್ಯಕಾಂತಿ ಪ್ರತಿ ಕ್ವಿಂಟಾಲ್‌ಗೆ 7,280 ರೂ. ಬೆಂಬಲವಾಗಿ ಒಬ್ಬ ರೈತರಿಂದ 15 ಕ್ವಿಂಟಾಲ್ ಖರೀದಿಸಲು ಅವಕಾಶವಿದೆ. ರೈತರು 188 ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಮಹಾಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಮಾಂತಮ್ಮ ಹೊಸೂರ, ಗಿರಿಜಾ ಗಂಜೀಹಾಳ, ಜೈನಸಾಬ ಹಗೇದಾಳ, ಶಿವಾನಂದ ಕಂಠಿ, ಸಂಗಣ್ಣ ಗಂಜಿಹಾಳ, ವಿಜಯ ಗದ್ದನಕೇರಿ, ಬಸವಂತಪ್ಪ ಅಂಟರತಾನಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವನಗೌಡ ಜಡಿಯಪ್ಪಗೌಡರ, ನಾಗಪ್ಪ ಬೀಳಗಿ, ಶಿವಾನಂದ ಕಂಠಿ, ಗಂಗಣ್ಣ ಇಲಕಲ್ಲ, ಮಲ್ಲಣ್ಣ ಹೂಗಾರ, ಮಹಾಂತೇಶ ನಾಡಗೌಡ, ಮುತ್ತು ಕುದರಿಮನಿ, ರಾಜು ಕರಂಡಿ, ಇತರರಿದ್ದರು.