ರೈತರು ಜೀವಾಮೃತದ ಬಳಸಲು ಮುಂದಾಗಲಿ

Let the farmers start using Jeevamrita
ಢವಳಗಿ ಸಮೀಪದ ಸಿದ್ದಾಪುರ ಪಿ.ಟಿ.ಗ್ರಾಮದ ಬಾಪುಗೌಡ ಪಾಟೀಲರ ಹೊಲದಲ್ಲಿ ವಿಜಯಪುರದ ಹಿಟ್ನಳ್ಳಿ ಕೃಷಿ ಕಾಲೇಜಿನ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಮಣ್ಣಿನ ಫಲವತ್ತತೆ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಕಿಶನ ಪವರ್​, ಡಾ.ಎಸ್​.ಜಿ.ಅಸ್ಕಿ, ಸಚಿನ ಸಿದ್ನಾಳ, ಸುನೀಲ ಕರಂಜೆ ಇತರರಿದ್ದರು.
Published on

ಢವಳಗಿ: ಸಮೀಪದ ಸಿದ್ದಾಪುರ ಪಿ.ಟಿ.ಗ್ರಾಮದ ಬಾಪುಗೌಡ ಪಾಟೀಲ ಅವರ ಹೊಲದಲ್ಲಿ ವಿಜಯಪುರದ ಹಿಟ್ನಳ್ಳಿ ಕೃಷಿ ಕಾಲೇಜಿನ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಮಣ್ಣಿನ ಫಲವತ್ತತೆಯ ಪ್ರಾತ್ಯಕ್ಷಿಕೆಯನ್ನು ಕಾರ್ಯಾನುಭವದ ಶಿಬಿರದಲ್ಲಿ ಪ್ರದರ್ಶನ ಮಾಡಿದರು.

ವಿದ್ಯಾರ್ಥಿ ಕಿಶನ ಪವರ್​ ಮಾತನಾಡಿ, ಜೀವಾಮೃತದ ಉಪಯೋಗಗಳ ಕೃಷಿ ವಿದ್ಯಾರ್ಥಿಗಳು ರೈತರಿಗೆ ವಿವರಿಸಿದರು. ಮಣ್ಣಿನ ಫಲವತ್ತತೆ ಹೆಚ್ಚುತ್ತದೆ,ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಬಹುದು, ಉಪಯುಕ್ತ ಸೂ್ಮಾಣು ಜೀವಿಗಳ ಸಂಖ್ಯೆ ಹೆಚ್ಚುತ್ತದೆ. ಲು ಪೋಷಾಂಶಗಳನ್ನು ಹೆಚ್ಚಿಸುತ್ತದೆ ಎಂದು ಮಾಹಿತಿ ನೀಡಿದರು.

ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ಎಸ್​.ಜಿ.ಅಸ್ಕಿ ಅವರ ಉಪಸ್ಥಿತಿಯಲ್ಲಿ ಜೀವಾಮೃತ ತಯಾರಿಸುವ ವಿಧಾನವನ್ನು ವಿದ್ಯಾರ್ಥಿಗಳಾದ ಸಚಿನ ಸಿದ್ನಾಳ, ಸುನೀಲ ಕರಂಜೆ, ಶರಣಗೌಡ ಮಾಲಿಪಾಟೀಲ, ರಾಜಶೇಖರ ಬಿರಾದಾರ, ಕೃಷ್ಣಾ ಖಾಸನಿಸ ಇತರರು ರೈತರು ಹಾಗೂ ರೈತ ಮಹಿಳೆಯರ ಮುಂಭಾಗ ಪ್ರದರ್ಶ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net