

ರಾಯಬಾಗ: ಬಿಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದ ರೈತರು ಮತ್ತು ಗ್ರಾಹಕರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.
ಪಟ್ಟಣದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಮಾವಿನಹೊಂಡ ರೇವಣಸಿದ್ದೇಶ್ವರ ಪಿಕೆಪಿಎಸ್‌ನ 116 ರೈತರಿಗೆ ಬುಧವಾರ 62 ಲಕ್ಷ ರೂ. ಬೆಳೆಸಾಲ ಚೆಕ್ ವಿತರಿಸಿ ಮಾತನಾಡಿದರು. ರೈತರಿಗೆ ಶೂನ್ಯಬಡ್ಡಿದರದಲ್ಲಿ ಸಾಲ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಸದುಪಯೋಗ ಪಡೆಯಬೇಕು. ರೈತರು ಕಬ್ಬಿನ ಬಿಲ್ ಬಿಡಿಸಿಸಿ ಬ್ಯಾಂಕ್‌ಗೆ ಜಮೆ ಮಾಡುವಂತೆ ನೋಡಿಕೊಳ್ಳಬೇಕು. ಪಿಕೆಪಿಎಸ್‌ದಿಂದ ಟ್ರ್ಯಾಕ್ಟರ್ ಸಾಲ ನೀಡಲಾಗುತ್ತಿದೆ. ಶೀಘ್ರದಲ್ಲಿ ರಾಯಬಾಗ ತಾಲೂಕಿನ ನಿಪನಾಳ ಮತ್ತು ನಸಲಾಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಗಳು ಪ್ರಾರಂಭಗೊಳ್ಳಲಿವೆ ಎಂದು ತಿಳಿಸಿದರು.
ತಾಲೂಕು ನಿಯಂತ್ರಣಾಧಿಕಾರಿ ಎಸ್.ಬಿ. ಪಾಟೀಲ, ಶಾಖೆ ವ್ಯವಸ್ಥಾಪಕ ಬಿ.ಪಿ. ರಾಯಣ್ಣವರ, ಬ್ಯಾಂಕ್ ನಿರೀಕ್ಷಕರಾದ ಮಂಜುನಾಥ ಜಂಬಗಿ, ಸುಧೀರ ನಂದಗಾಂವ, ಚಿದಾನಂದ ಬನಶಂಕರಿ, ಮಾವಿನಹೊಂಡ ರೇವಣಸಿದ್ದೇಶ್ವರ ಪಿಕೆಪಿಎಸ್ ಅಧ್ಯಕ್ಷ ವಿ.ಎಸ್. ಪೂಜಾರಿ, ಮಹೇಶ ಕೊರವಿ, ಮಹಾದೇವ ಲಕ್ಷ್ಮೇಶ್ವರ, ಚಂದ್ರಕಾಂತ ದೇಸಾಯಿ, ರೇವಪ್ಪ ಪೂಜಾರಿ, ಕಲ್ಲಪ್ಪ ಕಗ್ಗೂಡೆ, ಮಹಾದೇವ ಸಾರಾಪೂರೆ, ಮಲ್ಲಿಕಾರ್ಜುನ ಜಿರಲೆ, ವಿನೋದ ಪೂಜಾರಿ, ಅಲಗೊಂಡ ತಟ್ಟಿಮನಿ, ಮಹಾಂತೇಶ ಬೆಳಕೂಡೆ, ಮಹಾದೇವ ನಾಯಿಕ ಇತರರಿದ್ದರು.