ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಲಿ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್

Shettar'
Published on

ರೈತರಿಗೆ ಸಾಲಮನ್ನಾ ಬೇಕಾಗಿಲ್ಲ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಸಾಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ರೈತ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಮೇಳದ ಮೂಲಕ ನಮ್ಮ ರೈತರ ಬಗ್ಗೆ ಹೆಚ್ಚಿನ ಗಮನಹರಿಸಿರುವ ವಿಜಯವಾಣಿ ಕಾರ್ಯ ಶ್ಲಾಘನೀಯ ಎಂದರು. ಕೃಷಿಮೇಳದ ಮೂಲಕ ರೈತರಿಗೆ ತಿಳಿವಳಿಕೆ ನೀಡುವ ಪ್ರಯತ್ನ ನಡೆದಿದೆ. ವಿವಿಧ ಮಳಿಗೆಗಳ ಮೂಲಕ ರೈತರಿಗೆ ಸಮಗ್ರ ಮಾಹಿತಿ ನೀಡಲಾಗಿದೆ. ಆಧುನಿಕ ಕೃಷಿ ಪದ್ಧತಿ ಬಗ್ಗೆಯೂ ಅರಿವು ಮೂಡಿಸುವ ಪ್ರಯತ್ನ ಮಾಡಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನ್ನದಾತರ ಬಗ್ಗೆ ಸಂಕೇಶ್ವರರ ಕಾಳಜಿ ಶ್ಲಾಘನೀಯ

ವಿಆರ್​ಎಲ್ ಸಂಸ್ಥೆಯು ರೈತರು ಹಾಗೂ ಸಾಮಾಜಿಕ ಕಳಕಳಿ ಹೊಂದಿದೆ ಎಂಬುದಕ್ಕೆ ಈ ಕೃಷಿ ಮೇಳ ಸಾಕ್ಷಿ. ಅನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ನಾನು, ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ನಮ್ಮ ಪತ್ರಿಕೆ ಎಂಬ ಅಭಿಮಾನದಿಂದ ಇಲ್ಲಿಗೆ ಬಂದಿರುವೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು. ಡಾ.ವಿಜಯ ಸಂಕೇಶ್ವರ ಅವರು ರೈತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ಈ ಕೃಷಿ ಮೇಳ ಆಯೋಜನೆ ಮೂಲಕ ಅನ್ನದಾತರಿಗೆ ಕೃಷಿಯ ಆಧುನಿಕ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೆಳದಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ. ಇಂತಹ ಇನ್ನಷ್ಟು ಮೇಳಗಳನ್ನು ವಿಆರ್​ಎಲ್ ಸಮೂಹ ಆಯೋಜಿಸಲಿ ಎಂದು ಆಶಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net