

ರಾಯಬಾಗ: ನವಲಗುಂದ, ನರಗುಂದ ರೈತ ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮರಣಾರ್ಥವಾಗಿ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ ಎಂದು ರೈತ ಮುಖಂಡ ಮಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಹಸಿರು ಸೇನೆ ಮತ್ತು ರೈತ ಸಂಘ ತಾಲೂಕು ಘಟಕದಿಂದ ಭಾನುವಾರ 44ನೇ ರೈತ ಹುತಾತ್ಮ ದಿನದ ಅಂಗವಾಗಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿಗೆ ಗೌರವ ಸಲ್ಲಿಸಿ ಮಾತನಾಡಿದರು. ಸರ್ಕಾರ ರೈತರಿಗೆ ಸಮರ್ಪಕ ಬರ ಪರಿಹಾರ ನೀಡಬೇಕು.
ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಕೂಡ್ರಿಸುವುದು ಬಂದ್ ಮಾಡಿ, ರೈತರಿಗೆ ಉಚಿತ ವಿದ್ಯುತ್ ನೀಡಬೇಕು. ರೈತರಿಗೆ ಮಾರಕ ಆಗಿರುವ ಭೂ ಸುಧಾರಣೆ ಕಾಯ್ದೆ ರದ್ದು ಪಡಿಸಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಕೊಟಬಾಗಿ, ಹನುಮಾನ ಏತ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ವಿಜಯ ಶ್ರೇಷ್ಠಿ, ನಿಜಗುಣಿ ನಾವಿ, ಶ್ರೀಶೈಲ ಸಾಬಾಣಿ, ರಾಯಗೌಡ ಪಾಟೀಲ, ಸಾವಂತ ಕೊಚೇರಿ, ಅಪ್ಪಾಸಾಬ ಮಾನೆ, ರವಿ ಪಾಟೀಲ, ತ್ಯಾಗರಾಜ ಕದಂ, ಸುಲ್ತಾನ ಪೂಜಾರಿ, ಕಲಗೌಡ ಪಾಟೀಲ, ಮಹಾದೇವ ಪಾಟೀಲ, ಮೀರಾಸಾಬ್ ಖಣದಾಳೆ, ಶ್ಯಾಮರಾವ್ ಬನಶಂಕರಿ, ಸಿದ್ಧಪ್ಪ ಬಾವಚಿ, ಸಿದ್ರಾಮ್ ಶಿರಗಾವೆ ಇತರರಿದ್ದರು.