

ಮುದಗಲ್: ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪೌತಿ ಖಾತೆ ಈ ಆಂದೋಲನವನ್ನು ಇಲಾಖೆ ಹಮ್ಮಿಕೊಂಡಿದೆ. ರೈತರು ತಮ್ಮ ಪಿತ್ರಾರ್ಜಿತರು ಪೋತಿಯಾದಲ್ಲಿ ವಂಶಾವಳಿ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ಪೌತಿ ಮಾಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸತ್ಯಮ್ಮ ಬುಧವಾರ ರೈತರಿಗೆ ತಿಳಿಸಿದರು.
ಪಟ್ಟಣದ ನಾಡ ಕಾರ್ಯಾಲಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ 11 ಸಾವಿರಕ್ಕೂ ಅಧಿಕ ಪೌತಿ ಖಾತೆದಾರರಿರುವ ಮಾಹಿತಿ ಲಭ್ಯವಾಗಿದ್ದು, ಇದರಿಂದ ಎಲ್ಲ ರೈತರಿಗೆ ಬ್ಯಾಂಕ್ ಸಾಲ ಪಡೆಯಲು, ಬೆಳೆ ವಿಮೆ ಮತ್ತು ತಲುಪಬೇಕಾಗಿರುವ ಸರ್ಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ನಾಡ ಕಚೇರಿ ಪುರಸಭೆ ಕಾರ್ಯಾಲಯದ ಕಟ್ಟಡದಲ್ಲಿದ್ದು ಮಳೆಗೆ ಸೋರುತ್ತಿದ್ದು ಇದರ ದುರಸ್ತಿ ಮತ್ತು ಕಟ್ಟಡ ಕಾಮಗಾರಿ ವಿಳಂಬ, ಹೆಚ್ಚುವರಿ ಆಧಾರ ಕೇಂದ್ರ ತೆರೆಯಲು ಸೇರಿದಂತೆ ಸಾರ್ವಜನಿಕರ ಸೇವೆಗೆ ಯಾವದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು. ಉಪ ತಹಸೀಲ್ದಾರ್ ತುಳಜಾರಾಮಸಿಂಗ್, ಕಂದಾಯ ನಿರೀಕ್ಷಕ ಶಂಕ್ರಪ್ಪ ಪಟ್ಟಣಶೆಟ್ಟಿ ಇತರರಿದ್ದರು.