ರೈತರು ಕೃಷಿಮೇಳ ಪ್ರಯೋಜನ ಪಡೆಯಲಿ

9Aigali1
Published on

ಐಗಳಿ: ಪ್ರಥಮ ಬಾರಿಗೆ ಹಮ್ಮಿಕೊಳ್ಳುತ್ತಿರುವ ಕೃಷಿಮೇಳವನ್ನು ರೈತರು ಉಪಯೋಗ ಮಾಡಿಕೊಳ್ಳಬೇಕು. ಯಾವುದೇ ಕೊರತೆ ಆಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಸೂಚಿಸಿದರು.

ಇಲ್ಲಿನ ಮಾಣಿಕಪ್ರಭು ವಿರಕ್ತಮಠದ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳುತ್ತಿರುವ ಕೃಷಿಮೇಳದ ಸಿದ್ಧತೆಯನ್ನು ಭಾನುವಾರ ಪರಿಶೀಲಿಸಿ ಮಾತನಾಡಿ, 40 ವರ್ಷಗಳಿಂದಲೂ ರಾಚೋಟೇಶ್ವರ ದೇವರುಗಳ ನೇತೃತ್ವದಲ್ಲಿ ಬೃಹತ್ ಜಾನುವಾರು ಪ್ರದರ್ಶನ ಮತ್ತು ಮಾರಾಟಕ್ಕೆ ಜಾತ್ರೆ ಹೆಸರುವಾಸಿಯಾಗಿದೆ.

ಕೃಷಿ ಮೇಳದಲ್ಲಿ ಸಾವಯವ ಕೃಷಿ, ಹನಿ ನೀರಾವರಿ, ಸವಳು ಜವಳು, ಹೈನುಗಾರಿಕೆ, ಕಬ್ಬಿನ ಹೊಸ ತಳಿ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿ ಪರಿಣಿತರಿಂದ ವಿವಿಧ ವಿಷಯಗಳ ಮಾಹಿತಿ ದೊರೆಯಲಿದೆ ಎಂದರು. ಬೈರು ಬಿಜ್ಜರಗಿ, ಗುರಪ್ಪ ಬಿರಾದಾರ, ದುಂಡಪ್ಪ ದೊಡಮನಿ, ಅಂಬಣ್ಣ ಬಿರಾದಾರ, ಅಪ್ಪಾಸಾಹೇಬ ಹಾಲಳ್ಳಿ, ಪ್ರಭು ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net