ರೈತ ಸಂಘಟನೆ ಬಲಿಷ್ಠಗೊಳಿಸಲು ಪ್ರಯತ್ನಿಸಲಿ

3Rayabag1
Published on

ರಾಯಬಾಗ: ರೈತ ಸಂಘವನ್ನು ಮತ್ತೆ ಬಲಿಷ್ಠವಾಗಿ ಕಟ್ಟಲು ಎಲ್ಲರೂ ಕೈಜೋಡಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಹೇಳಿದರು.

ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಸೋಮವಾರ ಜರುಗಿದ ಪ್ರೊ.ನಂಜುಂಡಸ್ವಾಮಿ 21ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಒಡೆದು ಹೋದ ರಾಜ್ಯ ರೈತ ಸಂಘಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸಲಾಗುತ್ತಿದೆ. ಪ್ರೊ.ನಂಜುಂಡಸ್ವಾಮಿ ಅವರ ಕನಸು ನನಸಾಗಿಸಲು ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದರು.

ತಾಲೂಕಾಧ್ಯಕ್ಷ ವಿಜಯ ಶ್ರೇಷ್ಠಿ, ರೈತ ಮುಖಂಡ ಚೂನಪ್ಪ ಪೂಜಾರಿ, ಯಾಜ್, ಮಲ್ಲಪ್ಪ ಅಂಗಡಿ, ಮಾಯಗೌಡ ಪಾಟೀಲ, ದಿಲೀಪ ಸಮಾಜೆ, ಅಪ್ಪಾಸಾಹೇಬ ಮಾನೆ, ಮಹಾದೇವ ಪಾಟೀಲ, ಶ್ರೀಶೈಲ ಸಾಬಾನೆ, ನಿಂಗಪ್ಪ ಪೂಜೇರಿ, ಸುಲ್ತಾನ ಪೂಜಾರಿ, ಭೀಮಸೇನ ಪಿಸಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net