ರೈತನ ಬೆಳೆಗೆ ಬೆಂಬಲ ಬೆಲೆ ನೀಡಲಿ

HRP Swamiji
ಅರಸೀಕೆರೆಯಲ್ಲಿ ಕೋಲಶಾಂತೇಶ್ವರ ರಥೋತ್ಸವದ ಪ್ರಯುಕ್ತ ಎಂಎಸ್ಸಿ ಅಗ್ರಿಯಲ್ಲಿ ಮೂರು ಚಿನ್ನದ ಪದಕ ಪಡೆದ ಸಹನಾಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ, ಸಂಸದ ವೈ. ದೇವೇಂದ್ರಪ್ಪ, ಪ್ರಶಾಂತ್ ಪಾಟೀಲ್, ವೈ.ಡಿ.ರಂಗನಾಥ್ ಇತರರಿದ್ದರು.
Published on

ಹರಪನಹಳ್ಳಿ: ರೈತನ ಹೆಸರಿನಲ್ಲಿ ಅಧಿಕಾರ ಹಿಡಿಯುವ ಪಕ್ಷಗಳು, ಕೇವಲ ಅನುಕಂಪದ ಮಾತುಗಳನ್ನಾಡದೆ ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ ಆತ್ಮ ಸ್ಥೈರ್ಯ ತುಂಬವ ಕೆಲಸ ಮಾಡಬೇಕು ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಅರಸೀಕೆರೆ ಕೋಲಶಾಂತೇಶ್ವರ ರಥೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಮಠದ ಆವರಣದಲ್ಲಿ ‘ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ’ ಎನ್ನುವ ನಾಟಕ ಉದ್ಘಾಟಿಸಿ ಮಾತನಾಡಿದರು. ಸ್ವಾರ್ಥಕ್ಕಾಗಿ ರೈತನ ಹೆಸರನ್ನು ಬಳಸಿಕೊಳ್ಳದೆ ಆತನ ಬದುಕಿಗೆ ಆಸರೆಯಾಗುವ ಕೆಲಸ ಮಾಡಬೇಕು. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿದರು. ಎಂಎಸ್ಸಿ ಅಗ್ರಿಯಲ್ಲಿ ಮೂರು ಚಿನ್ನದ ಪದಕ ಪಡೆದ ಸಹನಾಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪ್ರಮುಖರಾದ ಪ್ರಶಾಂತ್ ಪಾಟೀಲ್, ವೈ.ಡಿ.ರಂಗನಾಥ್, ಅಡ್ಡಿ ಚನ್ನವೀರಪ್ಪ, ಕೆ.ಮಹಂತೇಶ್, ವೀರೇಶ್, ಶಶಿಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net