ಕಾರ್ಖಾನೆಗಳು ಎರಡನೇ ಬಿಲ್ ನೀಡಲಿ

5ATHANIGRAMIN1.jpg
Published on

ಅಥಣಿ ಗ್ರಾಮೀಣ: ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ಅಥಣಿ ತಾಲೂಕಿನ ರೆತರಿಗೆ ಕೂಡಲೇ 2ನೇ ಕಂತಿನ ಹಣ ಬಿಡುಗಡೆಗೊಳಿಸಬೇಕು ಎಂದು ರೈತ ಮುಖಂಡ ಬಸಪ್ಪ ಗುಮಟಿ ಹೇಳಿದರು.

ನಂದಗಾಂವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಬಸಪ್ಪ ಗುಮಟಿ ಮಾತನಾಡಿದರು. ರಾವಸಾಬ ಬಿರಾದಾರಪಾಟೀಲ, ನೇಮಣ್ಣ ದರೂರ, ನಾನಾಸಾಬ ಸಿರಿಗೌಡ, ಭರಮು ಬಳೋಜ ಇತರರಿದ್ದರು.
ನಂದಗಾಂವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಬಸಪ್ಪ ಗುಮಟಿ ಮಾತನಾಡಿದರು. ರಾವಸಾಬ ಬಿರಾದಾರಪಾಟೀಲ, ನೇಮಣ್ಣ ದರೂರ, ನಾನಾಸಾಬ ಸಿರಿಗೌಡ, ಭರಮು ಬಳೋಜ ಇತರರಿದ್ದರು.

ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸದ್ಯ ಸಕ್ಕರೆ ಬೆಲೆ ಕ್ವಿಂಟಾಲ್‌ಗೆ 3600ರಿಂದ 3700 ರೂ. ತನಕ ಹೆಚ್ಚಾಗಿದೆ. 1 ಟನ್ ಕಬ್ಬಿಗೆ 1 ಕ್ವಿಂಟಾಲ್ 25 ಕೆಜಿ ಸಕ್ಕರೆ ಉತ್ಪಾದನೆಯಾಗುತ್ತದೆ. ಎಲ್ಲ ಸಕ್ಕರೆ ಕಾರ್ಖಾನೆಗಳು ಇಥೆನಾಲ್, ಮೊಲ್ಯಾಸಿಸ್ ಸೇರಿ ಹಲವು ಉಪ-ಉತ್ಪನ್ನಗಳನ್ನು ತಯಾರಿಸಿ ಲಾಭದಲ್ಲಿವೆ. ಆದರೂ ತಾಲೂಕಿನ ಸಕ್ಕರೆ ಕಾರ್ಖಾನೆಗಳು ಟನ್‌ಗೆ ಮೊದಲ ಕಂತಿನಲ್ಲಿ 2,800 ರೂ. ಮಾತ್ರ ಜಮೆ ಮಾಡಿದ್ದಾರೆ. ಶೀಘ್ರ ಎರಡನೇ ಕಂತಿನ ಹಣ ಜಮೆ ಮಾಡಬೇಕು. ಮಳೆ ಕೊರತೆಯಿಂದ ಇಳುವರಿಯೂ ಕುಸಿದಿದೆ. ಉತ್ಪಾದನಾ ವೆಚ್ಚ  ದಿನೇದಿನೆ ಏರುತ್ತಿದೆ. ಬಿಲ್ ಬಿಡುಗಡೆಗೊಳಿಸದಿದ್ದರೆ ಹೋರಾಟಕ್ಕೆ ಇಳಿಯಲಾಗುವುದು ಎಂದರು.

ರಾವಸಾಬ ಬಿರಾದಾರಪಾಟೀಲ, ನೇಮಣ್ಣ ದರೂರ, ನಾನಾಸಾಬ ಸಿರಿಗೌಡ, ಭರಮು
ಬಳೋಜ, ಮತ್ತಪ್ಪ ಕಾಗವಾಡ, ಬುಜಬಲಿ ನಂದೇಶ್ವರ, ತಾತ್ಯಾಸಾಬ ಬಿರಾದಾರ ಪಾಟೀಲ, ಶ್ರೀಪಾಲ ದೇವದಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net