ಮಹಾಕಾವ್ಯಗಳು ಭಾಷಾಂತರವಾಗಲಿ: ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಸರ್ಕಾರಕ್ಕೆ ಆಗ್ರಹ

19
Published on

ಮೈಸೂರು: ವಿಶಾಲ ದೃಷ್ಟಿಕೋನವುಳ್ಳ ಮಂಟೇಸ್ವಾಮಿ, ಮಹದೇಶ್ವರರ ಮಹಾಕಾವ್ಯದ ಭಾಷಾಂತರಕ್ಕೆ ಸರ್ಕಾರ ಮುಂದಾಗಬೇಕು ಎಂದು ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಆಗ್ರಹಿಸಿದರು.
ಬೋಧಿವೃಕ್ಷ ಸೊಸೈಟಿ ಾರ್ ಡೆವಲಪ್‌ಮೆಂಟ್, ಕರ್ನಾಟಕ ಜಾನಪದ ಅಕಾಡೆಮಿ, ಮೈಸೂರು ವಿವಿ ಸವಾಜ ಕಾಂರ್ು ವಿಭಾಗ, ಮೈಸೂರು ಆಕಾಶವಾಣಿ ಎಫ್.ಎಂ-100.6ರ ಸಹಂೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಂೋಜಿಸಿದ್ದ ‘ಪರಂಜ್ಯೋತಿ ಮಂಟೇಸ್ವಾಮಿ ಒಂದು ಮರುದರ್ಶನ’ ರಾಷ್ಟ್ರೀಂು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಮಂಟೇಸ್ವಾಮಿ, ಮಹದೇಶ್ವರರ ಮಹಾಕಾವ್ಯಗಳನ್ನು ಬುಡಕಟ್ಟು ಕಾವ್ಯಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಈ ಪರಂಪರೆಗಳು ವಿಶಾಲಲೋಕ ದೃಷ್ಟಿಂುುಳ್ಳ ಪರಂಪರೆಗಳಾಗಿವೆ. ಹಾಗಾಗಿ ಈ ಎರಡೂ ಕಾವ್ಯಗಳನ್ನು ಇಂಗ್ಲಿಷ್, ಹಿಂದಿ ಅನುವಾದಕ್ಕೆ ಸರ್ಕಾರ ವಿದ್ವಾಂಸರ ತಂಡ ರಚಿಸಬೇಕು. ಈ ಮೂಲಕ ವಿನಾಶದ ಅಂಚಿನಲ್ಲಿರುವ ಕಾವ್ಯಗಳನ್ನು ಪುನರುಜ್ಜೀವನಗೊಳಿಸಬೇಕು ಸಲಹೆ ನೀಡಿದರು.
ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳಲ್ಲಿ ಪುರಾಣ, ಕಾವ್ಯ, ಮೂಢನಂಬಿಕೆ ಹುಟ್ಟಿದರೂ ಲೋಕ ಕಾರುಣ್ಯದಿಂದ ತುಂಬಿ ತುಳುಕುತ್ತಿವೆ. ಅವುಗಳ ಅರ್ಥವನ್ನು ಇತರರಿಗೂ ತಿಳಿಯುವಂತೆ ಮಾಡಬೇಕು ಎಂದು ಹೇಳಿದರು.
ಸಾಹಿತಿ ಬಂಜಗೆರೆ ಜಂುಪ್ರಕಾಶ್ ವಾತನಾಡಿ, ನಾವು ಆಧುನಿಕತೆಯ ಭ್ರಮೆಂುಲ್ಲಿ ಮುಳುಗದೆ ಆಧುನಿಕೋತ್ತರವಾದ ಹಿಮ್ಮುಖ ಚಲನೆಂುಲ್ಲಿ ಬಹಳ ಎಚ್ಚರದಿಂದ ನಮ್ಮ ಸಂಸ್ಕೃತಿಂುನ್ನು ಮರು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ‘ಧರೆಂು ತಂದವರು’ ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಡಾ.ಮಹಾದೇವ ಶಂಕನಪುರ, ಮಂಟೇಸ್ವಾಮಿ ಮೌಖಿಕ ಪರಂಪರೆಂು ವಾರಸುದಾರರಲ್ಲ. ಅಕ್ಷರ ಪರಂಪರೆಂು ವಕ್ತಾರರು. ಮಂಟೇಸ್ವಾಮಿ ಕಾವ್ಯ ಜನಪದ, ದಂತಕತೆ, ಇತಿಹಾಸ ಅಲ್ಲ ಎನ್ನಲಾಗುತ್ತದೆ. ಆದರೆ, ವಚನ ಪರಂಪರೆಂು ರೀತಿಂುಲ್ಲಿ ಬರೆದಿರುವುದು ಚರಿತ್ರೆಂುಲ್ಲಿ ಅನಾವರಣ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಂುುವ ವಿದ್ವಾಂಸ ಡಾ.ಕುಪ್ನಳ್ಳಿ ಎಂ.ಭೈರಪ್ಪ ವಿಶ್ವಾತ್ಮಕ ದೇಸೀ ಕಥನವಾಗಿ ಮಂಟೇಸ್ವಾಮಿ ಮಹಾಕಾವ್ಯ, ಸಾಹಿತಿ ಪ್ರೊ.ಶಂಕನಪುರ ಮಹಾದೇವ ಅವರು ಮಂಟೇಸ್ವಾಮಿ: ಕೊಡೇಕಲ್ಲು ಪರಂಪರೆ ಜತೆಗಿನ ಒಡನಾಟ, ಸಾಹಿತಿ ಪಿ.ನಾಗರತ್ನಮ್ಮ ಮಳವಳ್ಳಿ ಅವರು ಮಂಟೇಸ್ವಾಮಿ ಕ್ಷೇತ್ರದ ಸಂಶೋಧನಾತ್ಮಕ ನೆಲೆಗಳು ವಿಷಂು ಮಂಡಿಸಿದರು.
ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿ, ಚೆನ್ನಾಜಮ್ಮ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕೆಲಸ ಈ ಭಾಗದಲ್ಲಿ ಆಗುತ್ತಿಲ್ಲ. ಇವರ ಬಗ್ಗೆ ಹೆಚ್ಚು ತಿಳಿದುಕೊಂಡು ನಮ್ಮ ಸಂಸ್ಕ ೃತಿ ಪರಂಪರೆ ಉಳಿಸಿ ಬೆಳೆಸುವ ಕೆಲಸ ವಾಡಬೇಕಿದೆ ಎಂದರು.
ಕಪ್ಪಡಿ ಕ್ಷೇತ್ರದ ಮಠಾಧಿಪತಿ ಎಂ.ಎಲ್.ಶ್ರೀಕಂಠ ಸಿದ್ದಲಿಂಗರಾಜೇ ಅರಸ್, ಕೊಡೇಕಲ್ಲು ಬಸವ ಪೀಠಾಧಿಪತಿ ವೃಷಭೇಂದ್ರ ಅಪ್ಪನ, ಆಕಾಶವಾಣಿ ಮೈಸೂರು ನಿಲಂುದ ಮುಖ್ಯಸ್ಥ ಎಸ್.ಎಸ್.ಉಮೇಶ್, ಸಾವಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಬೋಧಿ ಪ್ರಕಾಶನದ ಅಧ್ಯಕ್ಷ ಮೈಸೂರು ಸತೀಶ್‌ಚಂದ್ರ, ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಚಂದ್ರಮೌಳಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ.ಉಮೇಶ್, ಡಾ.ಮೈಸೂರು ಗುರುರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net