

ಮೈಸೂರು: ನಗರದ ಹೊರ ವಲಯದಲ್ಲಿರುವ ಜ್ಞಾನ ಸರೋವರ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶನಿವಾರ ಮೈಸೂರು ಕೈಗಾರಿಕೆಗಳ ಸಂಘದಿಂದ ಮೇಘಾಲಯದ ನೂತನ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರನ್ನು ಅಭಿನಂದಿಸಲಾಯಿತು.
ಬಳಿಕ ಮಾತನಾಡಿ, ಮೇಘಾಲಯದ ರಾಜ್ಯಪಾಲರಾಗಿ ನೇಮಕವಾದ ಮೇಲೆ ಅಲ್ಲಿನ ಶೈಕ್ಷಣಿಕ ಮತ್ತು ಕೈಗಾರಿಕಾ ವಾತಾವರಣ ಪರಿಶೀಲಿಸಲಾಗಿದ್ದು, ಇಲ್ಲಿ ಹೆಚ್ಚಿನ ಮಟ್ಟದ ಬಂಡವಾಳ ಹೂಡಿಕೆ ಮಾಡಲು ಅವಕಾಶವಿದ್ದು, ಮೈಸೂರಿನ ಉದ್ಯಮಿಗಳು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮೇಘಾಲಯದಲ್ಲಿ ಉದ್ಯೋಗ ಸೃಷ್ಟಿಯೊಂದಿಗೆ ರಾಜ್ಯ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಇದರೊಂದಿಗೆ ಮೇಘಾಲದಯಲ್ಲಿ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಲು ಮಿಲ ಅವಕಾಶವಿದ್ದು, ಮೈಸೂರಿನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಲ್ಲಿಯೂ ಸಹ ಶಾಲಾ-ಕಾಲೇಜುಗಳನ್ನು ತೆರಯಲು ಮುಂದಾಗಬೇಕು ಎಂದು ಹೇಳಿದರು.