

ರಾಮದುರ್ಗ: ಕರೆಯ ಸುತ್ತಲೂ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ ಹೇಳಿದರು.
ತಾಲೂಕಿನ ಕುಳ್ಳೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಕೆರೆ ಸುತ್ತಲೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಅಳಿವಿನ ಅಂಚಿನಲ್ಲಿರುವ ಕೆರೆಗಳನ್ನು ದತ್ತು ಪಡೆದು ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಕೆರೆ ಅಭಿವೃದ್ಧಿ ಪಡಿಸಿ, ಗ್ರಾಮಸ್ಥರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಜಾರಿಯಲ್ಲಿದೆ ಎಂದರು.
ಬಸವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯ ನಿಂಗಪ್ಪ ಬಳಿಗಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ದೇವರೆಡ್ಡಿ, ಗಸ್ತು ಅರಣ್ಯಾಧಿಕಾರಿ ಡಿ.ಎಚ್.ಪಾಟೀಲ, ಮಹೇಶ ಕಿಲ್ಲಾರಿ, ಕೆರೆ ಅಭಿಯಂತ ನಿಂಗರಾಜ ಮಾಳವಾಡ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯ ಅಶೋಕ ಕುಲಗೋಡ, ಬಿ.ಎಸ್.ಹಲಗತ್ತಿ, ಕೆ.ಎಚ್.ಹಿರೇಹನಮಣ್ಣವರ, ಎಸ್.ಕೆ.ಬಾಲಣ್ಣವರ, ರುದ್ರಗೌಡ ಪಾಟೀಲ, ರಾಜು ಮರಲಿಂಗಣ್ಣವರ, ಶಿವು ಬಳಿಗಾರ, ಸಾವಿತ್ರಿ, ಲಕ್ಷಿ$್ಮ ಇತರರಿದ್ದರು. ವಲಯ ಮೇಲ್ವಿಚಾರಕ ಗಿರೀಶ ಸ್ವಾಗತಿಸಿದರು. ಸಂಸ್ಥೆ ಯೋಜನಾಧಿಕಾರಿ ಸಚಿನ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ಪ್ರದಿಪ ವಂದಿಸಿದರು.