ಆರ್ಥಿಕವಾಗಿ ಹಿಂದುಳಿದವರು ಮುಖ್ಯವಾಹಿನಿಗೆ ಬರಲಿ

25M.D.R.1
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗ್ರಾಮೀಣ ಕೈಗಾರಿಕೆಗಳು (ಖಾಗ್ರಾ) ಜಿಪಂ 2024-25 ನೆ ಸಾಲಿನ ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಉಪಕರಣಗಳನ್ನು ಶಾಸಕ ಕೆ.ಎಂ.ಉದಯ್ ವಿತರಣೆ ಮಾಡಿದರು. ಗುಣವತಿ ಹಾಗೂ ಫಲಾನುಭವಿಗಳು ಇದ್ದರು.
Published on

ಮದ್ದೂರು: ಆರ್ಥಿಕವಾಗಿ ಹಿಂದುಳಿದವರು ಸರ್ಕಾರ ಸವಲತ್ತು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವ ಜತೆಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಗ್ರಾಮೀಣ ಕೈಗಾರಿಕೆಗಳು (ಖಾಗ್ರಾ) ಜಿಪಂ 2024-25 ನೆ ಸಾಲಿನ ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಸರಬರಾಜು ಯೋಜನೆ, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಪವರ್‌ಟೂಲ್ಸ್‌ಗಳಾದ ಮರಗೆಲಸ, ಗಾರೆ ಕೆಲಸ, ಕ್ಷೌರಿಕ ಹಾಗೂ ದೋಬಿ ಉಪಕರಣಗಳ ವಿತರಣೆಗಾಗಿ ಲಾಟರಿ ಮುಖಾಂತರ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಉಪಕರಣ ವಿತರಿಸಿ ಮಾತನಾಡಿದರು.

ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ಅಧಿಕಾರಿಗಳು ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡುವ ಜತೆಗೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ 91 ಮಂದಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ, ಮರಗೆಲಸ, ಗಾರೆ ಕೆಲಸ, ಕ್ಷೌರಿಕ ಹಾಗೂ ದೋಬಿ ಜನಾಂಗದ 15 ಜನರಿಗೆ ಪವರ್ ಟೂಲ್ಸ್‌ಗಳನ್ನು ವಿತರಿಸಲಾಯಿತು.

ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಗ್ರಾಮೀಣ ಕೈಗಾರಿಕೆಯ ಗುಣವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net