

ಹುಬ್ಬಳ್ಳಿ: ವಿಶ್ವ ರಂಗಭೂಮಿ ದಿನಾಚರಣೆ-2025 ಹಾಗೂ ಅಲ್ಲಮ ಪ್ರಭುಗಳ ಜಯಂತಿ ನಿಮಿತ್ತ ರಂಗ ರೇಖಾ ಕಲಾ ಬಳಗ ವತಿಯಿಂದ ನಗರದ ಸವಾಯಿ ಗಂದರ್ವ ಕಲಾ ಮಂದಿರದಲ್ಲಿ ‘ಅಲ್ಲಮ ಜಗದ ಜಂಗಮ’ ಅರ್ಥಾತ್ ‘ಮಾಯೆಯ ಸೋಲು’ ಎಂಬ ನಾಟಕ ಪ್ರದರ್ಶನ ಇತ್ತೀಚೆಗೆ ಜರುಗಿತು.
ಕಸಾಪ ಹುಬ್ಬಳ್ಳಿ ಶಹರ ಘಟಕದ ಅಧ್ಯಕ್ಷ ವಿದ್ಯಾ ವಂಟಮೂರಿ ಉದ್ಘಾಟಿಸಿ ಮಾತಾನಾಡಿ, ಐತಿಹಾಸಿಕ ನಾಟಕ ಅಲ್ಲಮ ಪ್ರಭುವಿನ ಕಥಾ ಹಂದರವುಳ್ಳ ನಾಟಕ ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಶರಣರ ವಚನ ಸಾಹಿತ್ಯ ಆಧರಿಸಿ ಇನ್ನಷ್ಟು ನಾಟಕಗಳು ಹೀಗೆ ಹೊರಬರಬೇಕು. ಕಲೆಯ ಮೂಲಕ ಅವರ ಜೀವನ ಪರಿಚಯ ಆಗಬೇಕು ಎಂದರು.
ಹಿರಿಯ ಕಲಾವಿದೆ ವೀಣಾ ಅಟವಾಲೆ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಉಂಡಿ, ಸಾಧು ಕಟಾರೆ, ಮನಿಷ ಶಿಂಧೆ, ಶಾಂತಣ್ಣ ಕಡಿವಾಳ, ವಿ.ಜಿ. ಪಾಟೀಲ, ಬಸವರಾಜ ಚಕ್ರಸಾಲಿ ಇತರರು ಉಪಸ್ಥಿತರಿದ್ದರು.