ಕ.ಕ ಮಂಡಳಿಯಲ್ಲಿ ಜಿಲ್ಲೆಗೆ ಅವಕಾಶ ನೀಡಲಿ-ಕುಷ್ಟಗಿ

RAGHAVENDRA KUSHITIGI
RAGHAVENDRA KUSHITIGI
Published on

ರಾಯಚೂರು ಮಂಡಳಿಯಿAದ ರಚಿಸಲಾಗಿರುವ ಶೈಕ್ಷಣಿಕ ಸಮಿತಿಯಲ್ಲಿ ಬೀದರ್, ಬಳ್ಳಾರಿ ಮತ್ತು ಕಲ್ಬುರ್ಗಿ ಜಿಲ್ಲೆಗಳಿಗೆ ಸೀಮಿತವಾಗಿದ್ದು,ಪರಿಷ್ಕರಣೆ ಮಾಡಿ ಉಳಿದ ಜಿಲ್ಲೆಗಳಿಗೂ ಅವಕಾಶ ನೀಡದಿದ್ದರೇ ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ಒಳ ಮೀಸಲಾತಿ ನೀಡಬೇಕೆಂಬ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಜನಾಂದೋಲನ ಮಹಾಮೈತ್ರಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾದೇಶಿಕ ಸಮತೋಲನ ನಿವಾರಣೆಯ ಉದ್ದೇಶದಿಂದ ಪ್ರಾರಂಭವಾಗಿರು ಹೈದ್ರಾಬಾದ ಕರ್ನಾಟಕ ಅಭಿವೃದ್ದಿ ಮಂಡಳಿಯ ಮೇಲೆ ಕಲ್ಬುರ್ಗಿರಾಜಕೀಯ ಪ್ರಭಾವದಿಂದ ಇತರೆ ಜಿಲ್ಲೆಗಳಿಗೆ ಅನುದಾನ ಸೇರಿ ಎಲ್ಲ ಹಂತದಲ್ಲಿಯೂ ಅನ್ಯಾಯವಾಗುತ್ತಲೇ ಇದೆ.

ಕಲ್ಬುರ್ಗಿಜಿಲ್ಲೆಯ ನಾಯಕರಿಗೆ ಎಲ್ಲವೂ ತಮಗೆ ಮೀಸಲು ಎನ್ನುವ ಮನೋಭಾವ ಹೆಚ್ಚಳವಾ ಗುತ್ತಿದೆ. ಈ ಹಿಂದೆರಾಯಚೂರು ಜಿಲ್ಲೆಗೆ ಮಂಜೂರಿಯಾಗಬೇಕಿದ್ದ ಇಎಸ್‌ಐ ಆಸ್ಪತ್ರೆ, ವಿಶ್ವವಿದ್ಯಾಲಯ, ತಾಯಿ ಮತ್ತು ಮಗು ಆಸ್ಪತ್ರೆ ಸೇರಿದಂತೆ ಹvಯೋಜನೆಗಳು, ಅನುದಾನ ಕಲ್ಬುರ್ಗಿಗೆ ಸೀಮಿತವಾಗಿದೆ. ಅನ್ಯಾಯವನ್ನು ಪ್ರಶ್ನಿಸಬೇಕಾದ ಎಲ್ಲ ಪಕ್ಷದ ಶಾಸಕರಗಳು ಮೌನ ಸಮ್ಮತಿ ಪ್ರದರ್ಶಿಸುತ್ತಿದ್ದಾರೆ.

ಉಸ್ತುವಾರಿ ಸಚಿವರು ಸಹಿತ ಕಲ್ಬುರ್ಗಿ ಜಿಲ್ಲೆಯವರನ್ನೇ ಸರ್ಕಾರ ನೇಮಿಸಿದೆ. ಜಿಲ್ಲೆಯ ಎನ್.ಎಸ್.ಬೋಸರಾಜ, ಹಂಪನಗೌಡ ಬಾದರ್ಲಿ, ಡಾ.ಶಿವರಾಜಪಾಟೀಲ್ ಸೇರಿದಂತೆ ಎಲ್ಲಾ ಶಾಸಕರುಗಳು ಧ್ವನಿಯೆತ್ತಬೇಕಿದೆ.

ಮಂಡಳಿಯಲ್ಲಿ ಕಲ್ಬುರ್ಗಿ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಸಮಾನ ಅನುದಾನ, ನ್ಯಾಯ ಒದಗಿಸಲು ಮೀಸಲು ನಿಗಽ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಕಲಿಸಿದ ಪಾಠ ಕಾಂಗ್ರೆಸ್ಸ್ಗೆ ಕಲಿಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಾನವೆಸ್ಲಿ, ಖಾಜಾಅಸ್ಲಂ ಅಹ್ಮದ್, ಬಿ.ಬಸವರಾಜ, ಈರಣ್ಣ ಶೆಟ್ಟಿ, ಆರ್.ಬಸವರಾಜ, ಪರಪ್ಪ ನಾಗೋಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net