

ಹುಕ್ಕೇರಿ: ದೇಶಾದ್ಯಂತ ಜು.10ರಿಂದ ಆರಂಭಗೊಂಡ ಅಭಿಯಾನ ಅ.7ರ ವರೆಗೆ ನಡೆಯಲಿದೆ. ನ್ಯಾಯಾಲಯದ ವ್ಯಾಜ್ಯಗಳನ್ನು ಮಧ್ಯಸ್ಥಿಕೆದಾರರ ಮೂಲಕ ಸಂಧಾನ ಮಾಡಿಕೊಳ್ಳಲು ‘ಮಿಡಿಯೇಷನ್ ಾರ್ ನೇಷನ್’ ಅಭಿಯಾನ 90 ದಿನಗಳ ವರೆಗೆ ಹಮ್ಮಿಕೊಳ್ಳಲಾಗಿದೆ. ಕಕ್ಷಿದಾರರು ಇದರ ಪ್ರಯೋಜನ ಪಡೆಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೌಟುಂಬಿಕ ಸಮಸ್ಯೆ, ದೌರ್ಜನ್ಯ ಸೇರಿ ಮತ್ತಿತರ ವ್ಯಾಜ್ಯಗಳನ್ನು ಸಂಧಾನ ಮೂಲಕ ಪರಿಹರಿಸಲಾಗುವುದು ಎಂದರು.
ಸಿವಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಮಾತನಾಡಿ, ಸಂಧಾನಕಾರರು ತೆಗೆದುಕೊಂಡ ನಿರ್ಣಯಕ್ಕೆ ಕಕ್ಷಿದಾರರರು ಬದ್ಧರಿದ್ದು, ಈ ನಿರ್ಣಯವನ್ನು ನ್ಯಾಯಾಲಯದ ಮುಂದೆ ಮಂಡಿಸುತ್ತಾರೆ. ನ್ಯಾಯಾಧೀಶರ ಎದುರು ಕಕ್ಷಿದಾರರು ನಿರ್ಣಾಯಕ್ಕೆ ಸಮ್ಮತಿಸಿದಲ್ಲಿ ಡಿಕ್ರಿ ಆದೇಶ ನೀಡುತ್ತಾರೆ ಎಂದು ತಿಳಿಸಿದರು.
ಮಧ್ಯಸ್ಥಿಕೆದಾರರಾಗಿ ಹಿರಿಯ ವಕೀಲ ಬಿ.ಬಿ.ಪಾಸಪ್ಪಗೋಳ, ಪಿ.ಎಸ್.ಮುತಾಲಿಕ ಮತ್ತು ಸಿ.ಎಂ.ಸಂಸುದ್ದಿ ನೇಮಕವಾಗಿದ್ದಾರೆ ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಕಾರ್ಯದರ್ಶಿ ಎಸ್.ಜಿ.ನದ್ಾ, ಬಸವರಾಜ ಹುಂಡೇಕಾರ ಇತರರಿದ್ದರು.