ಬಿಡಾಡಿ ದನಗಳ ಕಾಯಿಲೆ ವಾಸಿಮಾಡಲಿ

2
ಅಥಣಿ ಪಟ್ಟಣದಲ್ಲಿರುವ ಬಿಡಾಡಿ ದನದ ಕಾಲಿಗೆ ಕುರು ಬೆಳೆದಿರುವುದು.
Published on

ಅಥಣಿ: ಪಟ್ಟಣದಲ್ಲಿ ಬಿಡಾಡಿ ದನಗಳ ಕಾಲಿಗೆ ಕುರು (ಉದ್ದನೆಯ ಉಗುರು) ಬೆಳೆದಿದ್ದು, ಇದರಿಂದ ಸರಿಯಾಗಿ ನಡೆಯಲಾಗುತ್ತಿಲ್ಲ. ರಸ್ತೆ ಮಧ್ಯೆಯೇ ನಿಲ್ಲುತ್ತಿವೆ. ಇದರಿಂದ ವಾಹನ ಸವಾರರಿಗೆ ಮತ್ತು ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಿಡಾಡಿ ದನಗಳ ಕಾಯಿಲೆ ಸಮಸ್ಯೆ ನಿವಾರಣೆ ಮಾಡಿ, ಸೂಕ್ತ ಚಿಕಿತ್ಸೆ ನೀಡುವಂತೆ ಪಟ್ಟಣದ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಗಳಾದ ಅಂಬೇಡ್ಕರ್ ವೃತ್ತ, ಶಿವಯೋಗಿ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ವಿಜಯಪುರ, ಮಿರಜ, ಗೋಕಾಕ, ಬೆಳಗಾವಿ, ಖಿಳೇಗಾವಿ ರಸ್ತೆ ಸೇರಿ ವಾರ್ಡ್‌ಗಳಲ್ಲಿರುವ ರಸ್ತೆ ಮಧ್ಯೆ ಜಾನುವಾರು ಮಲಗುತ್ತವೆ ಇಲ್ಲ ನಿಲ್ಲುತ್ತವೆ. ಹಾಗಾಗಿ, ಪುರಸಭೆಯು ಬಿಡಾಡಿ ದನಗಳಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net