ಅಂಗವಿಕಲರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ

17 june tnp 01
ತಿ.ನರಸೀಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂಗವಿಕಲರ ಸಮೃದ್ಧಿ ಸೇವಾ ಟ್ರಸ್ಟ್ ಹಾಗೂ ಅಂಗವಿಕಲರ ವಿವಿಧೋದ್ದೇಶ ಸಹಕಾರ ಸಂಘದ ಪ್ರಥಮ ಸಭೆಯಲ್ಲಿ ಭಾಗವಹಿಸಿದ್ದ ವಿಶೇಷ ಚೇತನರು.
Published on

ತಿ.ನರಸೀಪುರ:  ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಇತ್ತೀಚೆಗೆ ಅಂಗವಿಕಲರ ಸಮೃದ್ಧಿ ಸೇವಾ ಟ್ರಸ್ಟ್ ಹಾಗೂ ಅಂಗವಿಕಲರ ವಿವಿಧೋದ್ದೇಶ ಸಹಕಾರ ಸಂಘದ ಪ್ರಥಮ ಸಭೆ ಆಯೋಜಿಸಲಾಗಿತ್ತು.

ತಾಲೂಕಿನ ವಿಕಲಚೇತನರಿಗೆ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಪಟ್ಟಣದಲ್ಲಿ ಪ್ರತಿ ಭಾನುವಾರ ಕ್ರೀಡೆ ಮತ್ತು ಮನರಂಜನೆ ಕಾರ್ಯಕ್ರಮದ ತರಬೇತಿ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಧ್ಯಕ್ಷ ಎಸ್.ಸಿದ್ದರಾಜು ತುಂಬಲ ಮಾತನಾಡಿ, ಸರ್ಕಾರದ ಸೌಲಭ್ಯ ಎಲ್ಲ ವಿಕಲಚೇತನರು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿ ಭಾನುವಾರ ಆಯೋಜಿಸುವ ವ್ಹೀಲ್ ಚೇರ್ ಕ್ರಿಕೆಟ್, ಬ್ಯಾಸ್ಕೆಟ್ಬಾಲ್, ಓಟದ ಸ್ಪರ್ಧೆ, ಕೇರ್ ಆರಂ ಬೋರ್ಡ್, ನೃತ್ಯ, ಸೌಂದರ್ಯ ಸ್ಪರ್ಧೆ, ಜಾನಪದ, ಭಕ್ತಿ ಗೀತೆ, ಭಾವಗೀತೆ ಹಾಗೂ ಚಲನಚಿತ್ರ ಗೀತೆಗಳ ಬಗ್ಗೆ ತರಬೇತಿ ನೀಡುತ್ತೇವೆ. ವಿಶೇಷ ಚೇತನರು ಹೆಚ್ಚಿನ ವಿಕಲಚೇತನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕಾರ್ಯದರ್ಶಿ ಎನ್.ಮಹೇಶ್, ಖಜಾಂಚಿ ಲಿಂಗರಾಜು, ಪದಾಧಿಕಾರಿಗಳಾದ ಮಹದೇವು, ಗೋವಿಂದಶೆಟ್ಟಿ, ಸಿದ್ದೇಗೌಡ, ವೀರಭದ್ರಯ್ಯ, ದೊರೆಸ್ವಾಮಿ, ಸಿದ್ದೇಶ, ಸಮರ್ಥ, ಚಂದ್ರಮ್ಮ, ಭಾಗ್ಯಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net