

ಲಕ್ಷೆ್ಮೕಶ್ವರ: ಸಮಾಜದಲ್ಲಿ ಅಂಗವಿಕಲರ ಬಗೆಗಿನ ತಾತ್ಸಾರ ಮನೋಭಾವ ತೊಡೆದು ಹಾಕಲು ಮತ್ತು ಅವರಲ್ಲಿನ ಕೀಳರಿಮೆ ಹೋಗಲಾಡಿಸಿ ಸ್ವಾಭಿಮಾನದಿಂದ ಬಾಳಲು ಉತ್ತೇಜನ ನೀಡುವುದು ಅಂಗವಿಕಲರ ದಿನಾಚರಣೆಯ ಮುಖ್ಯಉದ್ದೇಶ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಪರ್ವತಮಲ್ಲಯ್ಯನ ದೇವಸ್ಥಾನದಲ್ಲಿ ಪುಲಿಗೆರೆ ಶ್ರೀ ಸೋಮೇಶ್ವರ ಅಂಗವಿಕಲರ ಸಂಘ, ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುರಸಭೆ ಲಕ್ಷೇಶ್ವರ ನಗರ ಪುನರ್ವಸತಿ ಕಾರ್ಯಕರ್ತರು ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಅಂಗವಿಕಲರು ಸ್ವಾವಲಂಬಿಯಾಗಿ ಬದುಕಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಪಂ ಮಾಜಿ ಅಧ್ಯಕ್ಷ, ವಕೀಲರಾದ ಎಸ್.ಪಿ. ಬಳಿಗಾರ, ರಾಮರಾವ್ ವೆರ್ಣೆಕರ, ಶಿಕ್ಷಕಿ ಮೈತ್ರಾದೇವಿ ಹಿರೇಮಠ, ವೀಣಾ ಸಾತಣ್ಣವರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಆರ್.ಸಿ. ಪಾಟೀಲ, ಆಯ್.ಎಸ್. ಮಡಿವಾಳರ, ಪುಲಗೇರಿ ಸೋಮೇಶ್ವರ ಅಂಗವಿಕಲರ ಸಂಘ ಅಧ್ಯಕ್ಷ ಶಿವಲಿಂಗಪ್ಪ ಕುಂಬಾರ, ಶಿರಹಟ್ಟಿಯ ಎಮ್ರ್ಡಬ್ಲ್ಯುಭಾರತಿ ಮೂರಶಿಳ್ಳಿ, ನಗರ ಪುನರ್ವಸತಿ ಕಾರ್ಯಕರ್ತ ಮಂಜುನಾಥ ರಾಮಗೇರಿ, ಪರಮೇಶ ಬಳಿಗಾರ, ಶರಣಪ್ಪ ಶಿಳ್ಳಿನ, ನಾಗಪ್ಪ ಅಣ್ಣಿಗೇರಿ, ನಾಮದೇವ ಲಮಾಣಿ, ವನಜಾಕ್ಷಿ ಹಾಲಗಿಮಠ, ಬಸವರಾಜ ಅರ್ಕಸಾಲಿ, ಶರಣಪ್ಪ ಬಡ್ನಿ,ನಧಾಪ್ ಸೇರಿ ಸೋಮೇಶ್ವರ ಅಂಗವಿಕಲರ ಸಂಘ ಸದಸ್ಯರು ನಗರದ ಅಂಗವಿಕಲರು ಪಾಲ್ಗೊಂಡಿದ್ದರು.