ಅಂಗವಿಕಲರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲಿ

lkp 8-3b
ಲೋಕಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭೂಮಿಪೂಜೆ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಲಕ್ಷ್ಮಣ ಮಾಲಗಿ ಇದ್ದರು.
Published on

ಲೋಕಾಪುರ: ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2024-25ನೇ ಸಾಲಿನ ಶೇ.5 ರಷ್ಟು ಕಾಯ್ದಿರಿಸಿದ ಯೋಜನೆಯಡಿ ಅಂಗವಿಕಲರಿಗೆ ವೀಲ್‌ಚೇರ್ ವಿತರಣೆ, ಎಸ್‌ಬಿಎಂ 2.0 ಯೋಜನೆಯಡಿ 42 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಅವರು ಮಾತನಾಡಿದರು.

ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಲಕ್ಷ್ಮಣ ಮಾಲಗಿ, ಬೀರಪ್ಪ ಮಾಯನ್ನವರ, ಗೋವಿಂದ ಕೌಲಗಿ, ಭೀಮನಗೌಡ ಪಾಟೀಲ, ರವಿ ರೊಡ್ಡಪ್ಪನವರ, ಕುಮಾರ ಕಾಳಮ್ಮನವರ, ಲೋಕಣ್ಣ ಉಳ್ಳಾಗಡ್ಡಿ, ಕೃಷ್ಣಾ ಹೂಗಾರ, ಮುತ್ತಪ್ಪ ಚೌಧರಿ, ಮಹಾನಿಂಗಪ್ಪ ಹುಂಡೇಕಾರ, ವೆಂಕಪ್ಪಗೌಡ ಚಿಂಚಖಂಡಿ, ವೆಂಕಣ್ಣ ಅಂಕಲಗಿ, ವೆಂಕಣ್ಣ ಕಮಕೇರಿ, ಶಬ್ಬೀರ ಬಾಗವಾನ, ಯಶವಂತ ಮಾದರ, ಅಬ್ದುಲ್ ರಹಿಮಾನ್ ತೊರಗಲ್, ಸುಲ್ತಾನ ಕಲಾದಗಿ, ಸೈಯ್ಯದ್ ಗುದಗಿ, ಜಾವೀದ ಮುಧೋಳ, ಸಿದ್ದು ಕಿಲಾರಿ, ಸುರೇಶ ಪೂಜಾರಿ, ಮುತ್ತಪ್ಪ ಗಡ್ಡದವರ, ರೇಖಾ ಪಾಟೀಲ, ಮಹೇಶ ಪೂಜಾರಿ, ಅಶೋಕ ದೊಡಮನಿ, ಕೆ.ಕೆ. ಬಾಗವಾನ, ಮಹಾದೇವ ದೊಡಮನಿ, ಹುಸೇನ ಗುದಗಿ, ಪ.ಪಂ. ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಜೆ.ಇ. ಪ್ರಶಾಂತ ಪಾಟೀಲ, ಜಾಧವ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net