ಶರಣರ ಧಾರ್ವಿುಕ ಚಳವಳಿ ತಿಳಿಸುವ ಕೆಲಸವಾಗಲಿ

23 hkr 01-sharanaru
Published on

ಹಿರೇಕೆರೂರ: ಶಿಕ್ಷಣ, ದಾಸೋಹ ಹಾಗೂ ಧರ್ಮದ ಕುರಿತು ಸಮಗ್ರವಾಗಿ ಚಿಂತನೆ ನಡೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿರುವ ಶರಣರ ಧಾರ್ವಿುಕ ಚಳವಳಿಯ ಬಗೆಗೆ ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.


ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಶ್ರಾವಣ ಸಂಜೆ ಪ್ರಥಮ ಸಾಹಿತ್ಯಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಮಕ್ಕಳು ಶಿಕ್ಷಣದ ಜತೆಗೆ ಪುಣ್ಯ ಪುರುಷರ ಚರಿತ್ರೆ ಅವರ ಜೀವನಾಧಾರಿತ ಅಂಶ ಹಾಗೂ ಅವರು ಸಾಗಿ ಬಂದ ಹಾದಿ ಕುರಿತು ತಿಳಿದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದರು.


ಸಮಾಜ ಸೇವಕ ಪ್ರಕಾಶಗೌಡ ಗೌಡರ ಮಾತನಾಡಿ, ಇಂದಿನ ಮಕ್ಕಳಿಗೆ ಶರಣರ ವಚನ, ಸಾಹಿತ್ಯ, ಪರಂಪರೆ, ಶ್ರದ್ಧೆ, ಭಕ್ತಿ, ಮಳೆಗಳು, ಋತುಗಳು, ನಕ್ಷತ್ರ ಹೀಗೆ ಎಲ್ಲವೂ ಮರೀಚಿಕೆಯಾಗುತ್ತಿದ್ದು, ಮುಂದಿನ ವರ್ಷ ಶ್ರಾವಣ ಮಾಸದಲ್ಲಿ ಇದೇ ವೇದಿಕೆಯಲ್ಲಿ ವಿದ್ಯಾರ್ಥಿಗಳು ಕನಿಷ್ಠ 10 ರಿಂದ 20 ವಚನಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿದರೆ ಅವರಿಗೆ ವೈಯುಕ್ತಿವಾಗಿ ಪ್ರತಿ ವಿದ್ಯಾರ್ಥಿಗೆ 1 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.


ಕಸಾಪ ತಾಲೂಕು ಅಧ್ಯಕ್ಷ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಿಣಿವಾಲ ಸರ್ಕಾರಿ ಶಾಲೆಯ ಶಿಕ್ಷಕ ರಾಜೇಂದ್ರ ಎಸ್. ಅವರು ಶರಣರ ಕಾಯಕ ಸಿದ್ಧಾಂತ ಕುರಿತು ಉಪನ್ಯಾಸ ನೀಡಿದರು.
ಕಸಾಪ ತಾಲೂಕು ಘಟಕದಿಂದ ಪತ್ರಕರ್ತರಾದ ಇಂದುಧರ ಹಳಕಟ್ಟಿ, ಪ್ರಕಾಶ ಬಣಕಾರ, ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಶಿಕ್ಷಕ ರಾಜೇಂದ್ರ ಎಸ್., ಸಮಾಜ ಸೇವಕ ಪ್ರಕಾಶಗೌಡ ಗೌಡರ ಅವರನ್ನು ಸನ್ಮಾನಿಲಾಯಿತು.


ಕಸಾಪ ಪದಾಧಿಕಾರಿಗಳಾದ ಕೆ.ಡಿ. ದಿವಗೀಹಳ್ಳಿ, ಸಿ.ಬಿ. ಮಾಳಗಿ, ಬಿ.ಎಸ್. ಪಾಟೀಲ, ಎಂ.ಎಂ. ಮತ್ತೂರ, ಎನ್.ಎಸ್. ಚಿಕ್ಕನರಗುಂದಮಠ, ರಾಮಣ್ಣ ತೆಂಬದ, ಪಿ.ಎಸ್. ಸಾಲಿ ಇದ್ದರು. ಶಿಕ್ಷಣ ಸಂಯೋಜಕ ಮೇಘರಾಜ ಮಾಳಗಿಮನಿ, ಶಿಕ್ಷಕ ಬಿ.ಎಸ್. ಬಣಕಾರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net