ಭಕ್ತರು ಮಠಗಳ ಉದ್ದಾರಕ್ಕಾಗಿ ಶ್ರಮಿಸಲಿ

12BLH4
Published on

ಬೈಲಹೊಂಗಲ: ಸಮಾಜ ತಿದ್ದುವಲ್ಲಿ ಮಠಗಳು ಅವಿರತವಾಗಿ ಪ್ರಯತ್ನಿಸುತ್ತಿದ್ದು, ರಾಜಕೀಯ ಬೆರಸದೆ ಭಕ್ತರು ಮಠಗಳ ಉದ್ದಾರಕ್ಕಾಗಿ ಶ್ರಮಿಸಬೇಕು ಎಂದು ಧಾರವಾಡದ ಮುರುಘಾಮಠದ ಪೀಠಾಧೀಶ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಲವಾಡ ವರ್ತಿ ಸಿದ್ದಬಸವೇಶ್ವರ ಮಠದ ೇತ್ರದಲ್ಲಿ ಸೋಮವಾರ ವರ್ತಿ ಸಿದ್ದಬಸವೇಶ್ವರ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಗುರುಭವನದ ಭೂಮಿಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ವರ್ತಿ ಸಿದ್ದಬಸವೇಶ್ವರ ಕಲ್ಯಾಣ ಮಂಟಪ ಸಾಮಾಜಿಕ ಕಾರ್ಯಗಳಿಗೂ ಸದ್ಬಳಕೆಯಾಗಲಿ ಎಂದರು.

ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡರ, ಕೆಪಿಸಿಸಿ ಸದಸ್ಯ ರೋಹಿಣಿ ಪಾಟೀಲ, ಜೆಡಿಎಸ್​ ಮುಖಂಡ ಶಂಕರ ಮಾಡಲಗಿ, ಧಾರ್ಮಿಕ ದತ್ತಿ ಇಲಾಖೆಯ ಮುಜುರಾಯಿ ರಾಜ್ಯ ನಿರ್ದೇಶಕ ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ ಮಾತನಾಡಿದರು.ಸಾಧಕರನ್ನು ಸನ್ಮಾನಿಸಲಾಯಿತು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಮುರಗೋಡ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ, ಮುನವಳ್ಳಿ ಮುರುಂದ್ರ ಸ್ವಾಮೀಜಿ, ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ದೊಡವಾಡ ಜಡಿಸಿದ್ದೇಶ್ವರ ಶಿವಾಚಾರ್ಯರು, ಉಗರಗೋಳ ಮಹಾಂತ ಸ್ವಾಮೀಜಿ, ಅರಳಿಕಟ್ಟಿಯ ಶಿವಮೂರ್ತೇಶ್ವರ ಸ್ವಾಮೀಜಿ, ಸಿದ್ದಬಸವ ದೇವರು, ಬಸವರಾಜ ದೇವರು, ವರ್ತಿ ಮಠದ ಶಂಕರ ದೇವರು, ರುದ್ರಪ್ಪ ಹೊಸೂರ, ಉಪಾಧ್ಯ ಬಸಪ್ಪ ಕರೀಕಟ್ಟಿ, ಬಾಬಣ್ಣ ಕುಡಸೋಮಣ್ಣವರ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯ ಬಸವರಾಜ ಬಾಳೇಕುಂದರಗಿ, ಬಸವರಾಜ ಬೋಳಗೌಡ್ರ, ವಿಜಯ ಮೆಟಗುಡ್ಡ, ಉಮೇಶ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net