

ಚಿಕ್ಕೋಡಿ: ಮಠ, ಮಂದಿರಗಳು ಹಾಗೂ ದೇವಾಲಯಗಳು ಮಾನವರನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವ ಕೇಂದ್ರಗಳು ಎಂದು ನಿಡಸೋಸಿ ಸಿದ್ದಸಂಸ್ಥಾನ ಮಠದ ಮನ್ನಿರಂಜನ ಡಾ.ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆಳಕೂಡ ಗ್ರಾಮದ ಬಸವನಗರದಲ್ಲಿ ಹಮ್ಮಿಕೊಂಡಿದ್ದ ರುದ್ರಮ್ಮ ದೇವಿ ನೂತನ ಕಟ್ಟಡದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ-ಕಾಲೇಜುಗಳು ಹುಟ್ಟಲಿಕ್ಕೆ ಅಂದಿನ ಮಠಗಳೇ ಕಾರಣ. ಭಕ್ತರಿಂದ ಬಂದ ದಾನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಇಂತಹ ದೇವಾಲಯಗಳಲ್ಲಿ ಶಿಕ್ಷಣ ಹಾಗೂ ಪ್ರಸಾದ ವ್ಯವಸ್ಥೆ ಮಾಡುವುದರಿಂದ ದೇಶ ಸದೃಢವಾಗಿ ಬೆಳೆಯಲು ಸಾಧ್ಯ ಎಂದರು.
ಚಂದ್ರಶೇಖರ ಅರಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಶ್ರೇಷ್ಠ ಮಠ ನಿಡಸೋಸಿಯ ಜಗದ್ಗುರುಗಳ ಅಮೃತ ಹಸ್ತದಿಂದ ಕೇವಲ ಐದು ತಿಂಗಳಲ್ಲಿ ದೇವಸ್ಥಾನದ ಕಾರ್ಯ ಮುಗಿದು ಇಂದು ಉದ್ಘಾಟನೆಗೊಂಡಿದ್ದು ಭಕ್ತರಿಗೆ ಸಂತೋಷ ತಂದಿದೆ ಎಂದು ತಿಳಿಸಿದರು.
ಡಾ.ಎಂ.ಬಿ.ಕುಂಬಾರ, ರಾಜು ಕುಂಬಾರ, ಮಹಾದೇವ ಪಾಮದಿನ್ನಿ, ಶಂಕರ ರುದ್ರಾಪುರೆ, ಮಲ್ಲಿಕಾರ್ಜುನ ಸನದಿ, ಸಿದ್ದಪ್ಪ ಮರ್ಯಾಯಿ, ಡಾ.ಸಾತಪ್ಪ ಬೆಳಗಲಿ, ಬಸವಣ್ಣಿ ಕುಂಬಾರ, ಶಂಕರ ಗಿರಿಜಾಯಿ, ಮಹಾಂತೇಶ ಯಶವಂತ, ಸಂಭಾ ಚವ್ಹಾಣ. ಮಲ್ಲಪ್ಪ ರುದ್ರಾಪುರೆ, ರುದ್ರೇಶ ಬಡಿಗೇರ, ಸಿದ್ದು ಪಚ್ಚಾಪುರೆ. ಮಲ್ಲಪ್ಪ ಅರಭಾಂವಿ, ಶಿವಪುತ್ರ ಮನಗುಳಿ, ಮಹಾವೀರ ತಪಕೀರೆ ಇತರರಿದ್ದರು.10-3