

ಸಿದ್ದಾಪುರ: ಜಿಲ್ಲಾ ನಾಮದೇವ ಸಿಂಪಿ ಸಮಾಜದ ವಾರ್ಷಿಕ ಸರ್ವಸಾಧಾರಣ ಸಭೆ ಪಟ್ಟಣದ ವಿಠ್ಠಲ ರುಕ್ಮಿಣಿ ದೇವಸ್ಥಾನದ ನಾಮದೇವ ಸಭಾಭವನದಲ್ಲಿ ಜರುಗಿತು.
ಸಮಾಜದ ಅಧ್ಯಕ್ಷ ಮೃತ್ಯುಂಜಯ ಚೌಧರಿ ಮಾತನಾಡಿ, ನಮ್ಮದು ಸಣ್ಣ ಸಮಾಜ. ಆದರೂ ಎಲ್ಲರೂ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರಾಜಕೀಯವಾಗಿಯೂ ನಮ್ಮ ಶಕ್ತಿ ಬಳಸಿಕೊಳ್ಳಬೇಕು. ವಿದ್ಯಾವಂತ ಯುವಕರು ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ತಾಲೂಕು ಸಿಂಪಿ ಸಮಾಜದ ಅಧ್ಯಕ್ಷ ಸುರೇಶ ಶಿಗ್ಗಾಂವಕರ, ಪ್ರಮುಖರಾದ ರಾಜು ಊರಣಕರ್, ಸಂಜೀವ ಪಿಸೆ, ಲಕ್ಷ್ಮಿ ಭಸ್ಮೆ, ನಾರಾಯಣ ಮೂಳೆ, ಅಶೋಕ ಮೂಳೆ, ಪ್ರೇಮಕುಮಾರ ಮಾಳವದೆ, ರವಿ ಕೊಳೇಕರ ಇತರರಿದ್ದರು.
ದತ್ತಿ ನಿಧಿ ಅಧ್ಯಕ್ಷ ವಿಜಯಕುಮಾರ ಮಾಳವದೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಿಂಪಿ ಸಮಾಜದ ನಿತಿನ್ ಬಟ್ಟಿ ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ ಚೌಧರಿ ವಂದಿಸಿದರು.