ಅರ್ಹರು ಪಿಂಚಣಿ ಸೌಲಭ್ಯ ಪಡೆದುಕೊಳ್ಳಲಿ

lkp 22-2
ಲೋಕಾಪುರ ಭಂಟನೂರ ಗ್ರಾಮದಲ್ಲಿ ಉಪತಹಸೀಲ್ದಾರ್ ಬಿ.ಎಸ್. ರಂಗಣ್ಣವರ ನೇತೃತ್ವದಲ್ಲಿ ಹೋಬಳಿಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಗ್ರಾಮ ಆಡಳಿತಾಧಿಕಾರಿ ಗಿರೀಶ ಹಡಪದ, ನಾಡ ಕಚೇರಿ ವಿಷಯ ನಿರ್ವಾಹಕ ಅರೀಶ ಕಡಮನೆ, ಲಾನುಭವಿಗಳಾದ ಮಹಾದೇವಿ ನಾಯ್ಕ, ಸಾವಿತ್ರಿ ಲಮಾಣಿ ಇತರರಿದ್ದರು.
Published on

ಲೋಕಾಪುರ: ಸಮೀಪದ ಭಂಟನೂರ ಗ್ರಾಮದಲ್ಲ್ಲಿ ಶನಿವಾರ ಲೋಕಾಪುರ ಹೋಬಳಿಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಉಪತಹಸೀಲ್ದಾರ್ ಬಿ.ಎಸ್. ರಂಗಣ್ಣವರ ನೇತೃತ್ವದಲ್ಲಿ ನಡೆಯಿತು.

ಅರ್ಹ ಲಾನುಭವಿಗಳಿಗೆ ಆದೇಶ ಪ್ರತಿ ನೀಡಿ ಮಾತನಾಡಿದ ರಂಗಣ್ಣವರ, ಸಾರ್ವಜನಿಕರ ಅನಕೂಲಕ್ಕಾಗಿ ಸರ್ಕಾರ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸುತ್ತಿದೆ. ಅರ್ಹರು ಪಿಂಚಣಿ ಸೌಲಭ್ಯ ಪಡೆದುಕೊಳ್ಳಲಿ ಎಂಬುದೇ ಅದಾಲತ್ ಉದ್ದೇಶವಾಗಿದೆ. ಅಂಗವಿಕಲರು, ರೈತರು, ಮಹಿಳೆಯರು, ಮಧ್ಯವರ್ತಿಗಳ ಮಾತಿಗೆ ಮರುಳಾಗದೆ ನೇರವಾಗಿ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಸೌಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹೋಬಳಿಮಟ್ಟದ ಪಿಂಚಣಿ ಅದಾಲತ್‌ನಲ್ಲಿ ಸ್ಥಳೀಯ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಹಲವಾರು ಅರ್ಹ ಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಿದರು.

ಗ್ರಾಮ ಆಡಳಿತಾಧಿಕಾರಿ ಗಿರೀಶ ಹಡಪದ ಮಾತನಾಡಿ, ಈಗಾಗಲೇ ಮಂಜೂರಿಗಾಗಿ ಹಣ ಪಾವತಿಯಾಗದೇ ಇರುವವರು ಹಾಗೂ ಪಿಂಚಣಿಗೆ ಸಂಬಂಧಿಸಿದ ಇನ್ನಿತರ ದೂರುಗಳಿದ್ದಲ್ಲಿ ಸದರಿ ಅದಾಲತ್‌ನಲ್ಲಿ ಹಾಜರಾಗಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ನಾಡ ಕಚೇರಿ ವಿಷಯ ನಿರ್ವಾಹಕ ಅರೀಶ ಕಡಮನೆ, ಲಾನುಭವಿಗಳಾದ ಮಹಾದೇವಿ ನಾಯ್ಕ, ಸಾವಿತ್ರಿ ಲಮಾಣಿ ಹಾಗೂ ಭಂಟನೂರ, ಜಿನ್ನೂರ, ಬದ್ನೂರ, ಚಿಕ್ಕೂರ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net